
ಧಾರವಾಡ, 01 ಮೇ (ಹಿ.ಸ.) :
ಆ್ಯಂಕರ್ : ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಸಂಗೀತಾಸಕ್ತರಿಗೆ ಹಿಂದೂಸ್ತಾನಿ ಸಂಗೀತ ತರಗತಿಯನ್ನು ಧಾರವಾಡ ಆಕಾಶವಾಣಿ ಏದುರುಗಡೆ ಶೇಖ್ ಕಂಪೌಂಡ್ನಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಜೂನ್ 01, 2026 ರಿಂದ ಪ್ರಾರಂಭಿಸಲಾಗುವುದು.
ಆಸಕ್ತ ವಿದ್ಯಾರ್ಥಿಗಳು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಕಚೇರಿಯಲ್ಲಿ ಅಥವಾ ಧಾರವಾಡದ ಸಹಾಯಕ ನಿರ್ದೇಶಕರ ಕಚೇರಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಮೇ 25, 2026 ರೊಳಗಾಗಿ ಸ್ವ-ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2442909 ಮತ್ತು ಮೊಬೈಲ್ ಸಂಖ್ಯೆ: 9113228457 ಗೆ ಸಂಪರ್ಕಿಸಬಹುದು ಎಂದು ಟ್ರಸ್ಟ್ನ ಸದಸ್ಯ ಕಾರ್ಯದರ್ಶಿಗಳು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa