ಸಿಂದಗಿ ತಾಪಂಗೆ ನೂತನ ಸರ್ಕಾರಿ ವಾಹನ ; ಪೂಜೆ ಸಲ್ಲಿಸಿ ಚಾಲನೆ
ವಿಜಯಪುರ, 08 ಏಪ್ರಿಲ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ನೂತನವಾಗಿ ಖರೀದಿಸಲಾದ ಸರ್ಕಾರಿ ವಾಹನಕ್ಕೆ ಶಾಸಕ ಅಶೋಕ್ ಮನಗೂಳಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡುವ ಮೂಲಕ ಸರ್ಕಾರಿ ಸೇವೆಗಳಿಗೆ ಹೊಸ ವೇಗ ನೀಡಿದರು. ಈ ವೇಳೆ ಮಾತನಾಡಿ ಅವರು, ತಾಲೂಕಿನಲ್ಲ
ವಾಹನ


ವಿಜಯಪುರ, 08 ಏಪ್ರಿಲ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ನೂತನವಾಗಿ ಖರೀದಿಸಲಾದ ಸರ್ಕಾರಿ ವಾಹನಕ್ಕೆ ಶಾಸಕ ಅಶೋಕ್ ಮನಗೂಳಿ ಅವರು ಪೂಜೆ ಸಲ್ಲಿಸಿ ಚಾಲನೆ ನೀಡುವ ಮೂಲಕ ಸರ್ಕಾರಿ ಸೇವೆಗಳಿಗೆ ಹೊಸ ವೇಗ ನೀಡಿದರು.

ಈ ವೇಳೆ ಮಾತನಾಡಿ ಅವರು, ತಾಲೂಕಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಮತ್ತು ವಿವಿಧ ಯೋಜನೆಗಳ ಮೇಲ್ವಿಚಾರಣೆ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲು ಈ ವಾಹನ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು. ಆಡಳಿತಾತ್ಮಕ ಕಾರ್ಯಗಳು ವೇಗವಾಗಿ ಮತ್ತು ಸಮರ್ಥವಾಗಿ ಸಾಗಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದು, ನೂತನ ವಾಹನದ ಬಳಕೆಯಿಂದ ಸಾರ್ವಜನಿಕ ಸೇವೆಗಳಿಗೆ ಇನ್ನಷ್ಟು ಚೈತನ್ಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande