ಪ್ರಧಾನ ಮಂತ್ರಿ ಮುದ್ರಾ ಯೋಜನೆಯ 11ನೇ ವಾರ್ಷಿಕೋತ್ಸವ ; ಪ್ರಧಾನಿ ಮೋದಿ ಶ್ಲಾಘನೆ
ನವದೆಹಲಿ, 08 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ 11ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದರ ಸಾಧನೆಗಳನ್ನು ಶ್ಲಾಘಿಸಿದ್ದಾರೆ. ಪ್ರಧಾನ ಮಂತ್ರಿಗಳ ಕಚೇರಿಯ ಮಾಹಿತಿ ಪ್ರಕಾರ, ಈ ಯೋಜನೆ ದೇಶದ ಯುವಕರಿಗೆ ಸ್ವಯಂ ಉದ್ಯೋಗದತ್ತ ಸಾಗಲು ಬಲವಾದ
Pm


ನವದೆಹಲಿ, 08 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ 11ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅದರ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

ಪ್ರಧಾನ ಮಂತ್ರಿಗಳ ಕಚೇರಿಯ ಮಾಹಿತಿ ಪ್ರಕಾರ, ಈ ಯೋಜನೆ ದೇಶದ ಯುವಕರಿಗೆ ಸ್ವಯಂ ಉದ್ಯೋಗದತ್ತ ಸಾಗಲು ಬಲವಾದ ವೇದಿಕೆಯಾಗಿದ್ದು, ಆರ್ಥಿಕ ಸ್ವಾವಲಂಬನೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.

11 ವರ್ಷಗಳ ಹಿಂದೆ ಪ್ರಾರಂಭವಾದ ಈ ಯೋಜನೆ, ಸರಿಯಾದ ಅವಕಾಶಗಳು ಮತ್ತು ಬೆಂಬಲ ದೊರೆತರೆ ಜನರು ತಮ್ಮದೇ ಉದ್ಯಮಗಳನ್ನು ಆರಂಭಿಸಿ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಯುವಕರ ಸಬಲೀಕರಣದಲ್ಲಿ ಮುದ್ರಾ ಯೋಜನೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ ಎಂದು ಅವರು ಒತ್ತಿಹೇಳಿದರು.

ಎಕ್ಸ್ ಮೂಲಕ ಹಂಚಿಕೊಂಡ ಸಂದೇಶದಲ್ಲಿ, ಮುಂದಿನ ದಿನಗಳಲ್ಲಿ ಈ ಯೋಜನೆ ದೇಶದ ಆರ್ಥಿಕ ಪ್ರಗತಿಗೆ ಇನ್ನಷ್ಟು ವೇಗ ನೀಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಸಂಸ್ಕೃತದ ಶ್ಲೋಕವೊಂದನ್ನು ಉಲ್ಲೇಖಿಸಿ, ಸ್ವಜ್ಞಾನ ಹೊಂದಿರುವ, ತಾಳ್ಮೆಯುಳ್ಳ, ಧರ್ಮನಿಷ್ಠ ಮತ್ತು ದುರಾಸೆಯಿಂದ ದೂರ ಇರುವ ವ್ಯಕ್ತಿಯೇ ನಿಜವಾದ ಬುದ್ಧಿವಂತ ಎಂದು ವಿವರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande