ಅಸ್ಸಾಂಗೆ ಆಗಮಿಸಿದ ವಿದೇಶಿ ಚುನಾವಣಾ ಪ್ರತಿನಿಧಿಗಳು
ಗುವಾಹಟಿ, 08 ಏಪ್ರಿಲ್ (ಹಿ.ಸ.): ಆ್ಯಂಕರ್: ಏಳು ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಹನ್ನೆರಡು ವಿದೇಶಿ ಪ್ರತಿನಿಧಿಗಳು ಹಾಗೂ ಭಾರತದ ಚುನಾವಣಾ ಆಯೋಗದ ಮೂವರು ಪ್ರತಿನಿಧಿಗಳು ಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (ಐಇವಿಪಿ) ಅಂಗವಾಗಿ ಬುಧವಾರ ಲೋಕಪ್ರಿಯ ಗೋಪಿನಾಥ್ ಬೋರ್ಡೋಲೋಯಿ ಅಂತಾರ
Delegation


ಗುವಾಹಟಿ, 08 ಏಪ್ರಿಲ್ (ಹಿ.ಸ.):

ಆ್ಯಂಕರ್:

ಏಳು ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಹನ್ನೆರಡು ವಿದೇಶಿ ಪ್ರತಿನಿಧಿಗಳು ಹಾಗೂ ಭಾರತದ ಚುನಾವಣಾ ಆಯೋಗದ ಮೂವರು ಪ್ರತಿನಿಧಿಗಳು ಅಂತಾರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (ಐಇವಿಪಿ) ಅಂಗವಾಗಿ ಬುಧವಾರ ಲೋಕಪ್ರಿಯ ಗೋಪಿನಾಥ್ ಬೋರ್ಡೋಲೋಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಎರಡು ದಿನಗಳ ಈ ಭೇಟಿಯ ಮುಖ್ಯ ಉದ್ದೇಶ ಜಾಗತಿಕ ಮಟ್ಟದಲ್ಲಿ ಚುನಾವಣಾ ಸಹಕಾರವನ್ನು ಬಲಪಡಿಸುವುದು ಹಾಗೂ ವಿವಿಧ ಚುನಾವಣಾ ಪ್ರಕ್ರಿಯೆಗಳ ಆಳವಾದ ಅಧ್ಯಯನ ಮಾಡುವುದು. ಈ ಅವಧಿಯಲ್ಲಿ ನಿಯೋಗವು ಮತದಾನ ವಿಧಾನ, ಆಡಳಿತಾತ್ಮಕ ವ್ಯವಸ್ಥೆಗಳು ಹಾಗೂ ಚುನಾವಣಾ ನಿರ್ವಹಣೆಯ ಕಾರ್ಯಪದ್ಧತಿಗಳನ್ನು ಸಮಗ್ರವಾಗಿ ಪರಿಶೀಲಿಸಲಿದ್ದಾರೆ.

ಅಧಿಕಾರಿಗಳ ಪ್ರಕಾರ, ಈ ಕಾರ್ಯಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಹೆಚ್ಚಿಸುವುದರೊಂದಿಗೆ ದೇಶಗಳ ಮಧ್ಯೆ ಪರಸ್ಪರ ಸಹಕಾರವನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿದೆ. ಜೊತೆಗೆ, ಭಾಗವಹಿಸುವ ರಾಷ್ಟ್ರಗಳ ನಡುವೆ ಅನುಭವಗಳ ವಿನಿಮಯ ಹಾಗೂ ಅತ್ಯುತ್ತಮ ಚುನಾವಣಾ ಪದ್ಧತಿಗಳ ಹಂಚಿಕೆಗೆ ಇದು ಉತ್ತಮ ಅವಕಾಶ ಒದಗಿಸುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande