ತನ್ವಿ ಮರ್ಚೆಡ್ ಗೌಡಗೆ ಪ್ರಥಮ ಸ್ಥಾನ, ಬಂಗಾರದ ಪದಕ
ಬಳ್ಳಾರಿ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಜ್ಞಾನಾಮೃತ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಡಾ. ಮರ್ಚೆಡ್ ಮಲ್ಲಿಕಾರ್ಜುನ ಗೌಡ ಅವರ ಪುತ್ರಿ ತನ್ವಿ ಮರ್ಚೆಡ್ ಗೌಡ ಅವರು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಬಿಎಸ್ಸಿ ಫ್ಯಾಷನ್ ಡಿಸೈ
ತನ್ವಿ ಮರ್ಚೆಡ್ ಗೌಡಗೆ ಪ್ರಥಮ ರ್ಯಾಂಕ್ ಮತ್ತು ಗೋಲ್ಡ್ ಮೆಡಲ್


ಬಳ್ಳಾರಿ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಜ್ಞಾನಾಮೃತ ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರಾಗಿರುವ ಡಾ. ಮರ್ಚೆಡ್ ಮಲ್ಲಿಕಾರ್ಜುನ ಗೌಡ ಅವರ ಪುತ್ರಿ ತನ್ವಿ ಮರ್ಚೆಡ್ ಗೌಡ ಅವರು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್ನಲ್ಲಿ ಪ್ರಥಮ ಸ್ಥಾನ ಪಡೆದು, ಬಂಗಾರದ ಪದಕವನ್ನು ಸ್ವೀಕರಿಸಿದ್ದಾರೆ.

ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ಅವರು ತನ್ವಿ ಮರ್ಚೆಡ್ ಗೌಡ ಅವರಿಗೆ ರ್ಯಾಂಕ್ ಮತ್ತು ಪದಕವನ್ನು ಪ್ರದಾನ ಮಾಡಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಸಿಸ್ಟಂಮ್ಸ್ನ ಮಹಾ ನಿರ್ದೇಶಕರಾಗಿರುವ ಡಾ. ಬಿನಯ್ ಕುಮಾರ್ ದಾಸ್ ಮತ್ತು ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರಮೇಶ್ ಬಿ., ವಿಶ್ವವಿದ್ಯಾಲಯದದ ಮೌಲ್ಯಮಾಪನ ವಿಭಾಗದ ಕುಲಸಚಿವ ಪ್ರೊ. ರಮೇಶ ಬಿ. ಕುಡೇನಟ್ಟಿ, ಕುಲಸಚಿವರಾದ ಎ. ನವೀನ್ ಜೋಸೆಫ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಬಿ.ಎಸ್ಸಿ. ಫ್ಯಾಷನ್ ಡಿಸೈನಿಂಗ್ ಪದವಿ ವಿದ್ಯಾಭ್ಯಾಸ ಮಾಡಿದ್ದ ಬಳ್ಳಾರಿಯ ತನ್ವಿ ಮರ್ಚೆಡ್ ಗೌಡ ಅವರು, ಬೋಧಕರು, ಪೋಷಕರು ಮತ್ತು ಹಿತೈಷಿಗಳ ಮಾರ್ಗದರ್ಶನದಲ್ಲಿ ರ್ಯಾಂಕ್ ಪಡೆದಿದ್ದೇನೆ. ತನ್ನ ಈ ಸಾಧನೆಗೆ ಸಹಕಾರ ನೀಡಿದ ಎಲ್ಲರಿಗೂ ತುಂಬು ಹೃದಯದ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande