ಸಂಡೂರು : ವಿದ್ಯುತ್ ವ್ಯತ್ಯಯ
ಸಂಡೂರು, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸಂಡೂರು 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಗಗಳ ಬದಲಾವಣೆ ಮತ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಏಪ್ರಿಲ್ 7ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗ
ಸಂಡೂರು : ವಿದ್ಯುತ್ ವ್ಯತ್ಯಯ


ಸಂಡೂರು, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸಂಡೂರು 33/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಗಗಳ ಬದಲಾವಣೆ ಮತ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಏಪ್ರಿಲ್ 7ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗರ, ಸುಶೀಲಾನಗರ ಗ್ರಾಮ ಪಂಚಾಯಿತಿಗೆ ಒಳಪಡುವ ಗ್ರಾಮಗಳಲ್ಲಿ ಎನ್ಜೆವೈ ಮತ್ತು ಐಪಿಸೆಟ್ ಗ್ರಾಹಕರಿಗೆ ಹಾಗೂ ಯಶವಂತನಗರ ಮತ್ತು ದೇವಗಿರಿ ಐಪಿಸೆಟ್ ಫೀಡರ್ಗಳ ವ್ಯಾಪ್ತಿಗೆ ಬರುವ ರೈತರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande