ಕೆ.ಜಿ.ಎಫ್ : ಗಡಿಪಾರು ಕಾಯ್ದೆ ಉಲ್ಲಂಘಿಸಿದ ಕುಖ್ಯಾತ ರೌಡಿ ಬಂಧನ
ಕೆ.ಜಿ.ಎಫ್:ಗಡಿಪಾರು ಕಾಯ್ದೆ ಉಲ್ಲಂಘಿಸಿದ ಕುಖ್ಯಾತ ರೌಡಿ ಬಂಧನ.
ಕೆ.ಜಿ.ಎಫ್ ರೌಡಿ ವಿಕ್ರಮ್


ಕೋಲಾರ, 0೬ ಕೆಜಿಎಫ್ (ಹಿ.ಸ) :

ಆ್ಯಂಕರ್ : ಕೆ.ಜಿ.ಎಫ್ ಪೊಲೀಸ್ ಜಿಲ್ಲೆಯ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯ ರೌಡಿ ವೈ.ವಿಕ್ರಮ್ ಎಂಬಾತನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಜಾಮೀನು ಪಡೆದು ಪುನಃ ಕೃತ್ಯಗಳಲ್ಲಿ ಭಾಗಿಯಾಗಿ ರೌಡಿ ಚಟುವಟಿಕೆಗಳನ್ನು ಮುಂದುವರೆಸಿದ್ದ. ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಕರ್ನಾಟಕ ಪೊಲೀಸ್ ಅಧಿನಿಯಮ ೧೯೬೩ ಕಲಂ ೫೫(ಎ) ಅಡಿಯಲ್ಲಿ ಆತನನ್ನು ಕೆ.ಜಿ.ಎಫ್ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ೬ ತಿಂಗಳು ಕಾಲ ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಆದರೆ ಈತನು ಗಡಿಪಾರು ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿ ಯಾದಗಿರಿ ನಗರ ಪೊಲೀಸ್ ಠಾಣೆಯಿಂದ ಬಂದ ಮಾಹಿತಿಯ ಮೇರೆಗೆ ಸದರಿ ರೌಡಿ ಆಸಾಮಿಯನ್ನು ಆತನ ವಾಸದ ಮನೆಯ ಬಳಿ ಆಂಡ್ರಸನ್ಪೇಟೆ ಪೊಲೀಸರು ವಶಕ್ಕೆ ಪಡೆದು, ಕರ್ನಾಟಕ ಪೊಲೀಸ್ ಅಧಿನಿಯಮ ತಿದ್ದುಪಡಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಆತನ ವಿರುದ್ಧ ಕಾನೂನು ಕ್ರಮ ವಹಿಸಿರುತ್ತಾರೆ.

ರೌಡಿ ಆಸಾಮಿಗಳು ಗಡಿಪಾರು ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಇದೇ ರೀತಿ ಕಠಿಣ ಕಾನೂನು ಕ್ರಮ ಕೈಗೊಂಡು ಬಂಧನ ಮಾಡಲಾಗಿದೆ. ಪೊಲೀಸ್ ಉಪಾಧೀಕ್ಷಕರಾದ ವಿ.ಲಕ್ಷö್ಮಯ್ಯ ಮತ್ತು ರಾಬರ್ಟ್ಸನ್ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್.ಎಮ್.ಎಸ್. ಮಾರ್ಗದರ್ಶನದಲ್ಲಿ ರೌಡಿಯನ್ನು ಬಂಧಿಸಿರುವ ಪಿ.ಎಸ್.ಐ ಮಂಜುನಾಥ.ಬಿ ಮತ್ತು ಸಿಬ್ಬಂದಿಯಾದ ರಮೇಶ್ ಜಂಬಗಿ, ಲೋಕೇಶ್ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande