ಪ್ರಜ್ಞೆಯ ಕೊರತೆಯ ಕಾರಣ ಸಮಸ್ಯೆಗಳು : ನಿರ್ಭಯಾನಂದ ಸ್ವಾಮೀಜಿಗಳು
ರಾಜ್ಕುಮಾರ್
ಪ್ರಜ್ಞೆಯ ಕೊರತೆಯ ಕಾರಣ ಸಮಸ್ಯೆಗಳು : ನಿರ್ಭಯಾನಂದ ಸ್ವಾಮೀಜಿಗಳು


ಪ್ರಜ್ಞೆಯ ಕೊರತೆಯ ಕಾರಣ ಸಮಸ್ಯೆಗಳು : ನಿರ್ಭಯಾನಂದ ಸ್ವಾಮೀಜಿಗಳು


ಪ್ರಜ್ಞೆಯ ಕೊರತೆಯ ಕಾರಣ ಸಮಸ್ಯೆಗಳು : ನಿರ್ಭಯಾನಂದ ಸ್ವಾಮೀಜಿಗಳು


ಬಳ್ಳಾರಿ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಮನುಷ್ಯನಲ್ಲಿರುವ ಪ್ರಜ್ಞೆಯ ಕೊರತೆಯ ಕಾರಣ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತಿವೆ ಎಂದು ಗದಗ-ವಿಜಯಪುರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ತಿಳಿಸಿದ್ದಾರೆ.

ಡಾ. ರಾಜ್‌ಕುಮಾರ್ ರಸ್ತೆಯಲ್ಲಿರುವ `ಪಾಂಚಜನ್ಯ’ ಸಭಾಂಗಣದಲ್ಲಿ ನಡೆದ ವಿವೇಕ ಮಂಟಪದ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರಜ್ಞಾವಂತಿಕೆ ಹಾಗೂ ಜಾಗೃತಿ ಮೂಡಿಸಲು ಗೌತಮಬುದ್ಧ, ವಿವೇಕಾನಂದ ಸೇರಿ ಅನೇಕ ಮಹಾತ್ಮರು ಶ್ರಮಿಸಿದರು. ಮನುಷ್ಯ ಸಮ್ಯಕ್ ಜೀವನ ನಡೆಸಲಿಕ್ಕಾಗಿ ಬುದ್ಧ ಅಷ್ಟಾಂಗ ಮಾರ್ಗವನ್ನು ಬೋಧಿಸಿದ್ದು, ಸ್ವಾಮಿ ವಿವೇಕಾನಂದರು ಧಾರ್ಮಿಕತೆ ಹೆಸರಿನಲ್ಲಿ ನಡೆದಿರುವ ಮೌಢ್ಯತೆ ವಿರುದ್ಧ ಸಮರವನ್ನೆ ಸಾರಿದ್ದರು ಎಂದರು.

ವೈಜ್ಞಾನಿಕತೆ ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ಶಿಸ್ತಿನ ಹಾಗೂ ವ್ಯವಸ್ಥಿತ ಜೀವನ ನಡೆಸಬೇಕು. ಮಹಾತ್ಮರು ಹೇಳಿದ ಮಾರ್ಗವನ್ನು ದೈನಂದಿನ ಜೀವನದಲ್ಲಿ ಅನುಸರಿಸಿದಾಗ ಮಾತ್ರ ಅವರು ಸಂತೋಷಗೊಳ್ಳುತ್ತಾರೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡ ಜೀರ್ರ ಗುರುಮೂರ್ತಿ ಹಾಗೂ ರಾಮಧೂತ ಕಂಪ್ಯೂಟರ್ಸ್ನ ಕೆ.ಎಸ್. ಬಾಬು ಅವರು ಶ್ರೀ ರಾಮಕೃಷ್ಣ ಪರಮಹಂಸ ಶ್ರೀ ಶಾರದಾ ಮಾತೆ ಹಾಗೂ ಶ್ರೀ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಸಂಗೀತ ಶಿಕ್ಷಕರಾದ ಬೆಳಗಲ್ಲು ಹನುಮಂತ ಹಾಗೂ ಶ್ರೀಮತಿ ಬೆಳಗಲ್ಲು ರೇಖಾ, ಕುಮಾರಿ ಶಾರದ, ಕುಮಾರ ದಿನಕರ್ ಅವರುಗಳು ಸುಮಧುರ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸುವುದರ ಮೂಲಕ ನೆರೆದ ಸಾರ್ವಜನಿಕರನ್ನು ಮಂತ್ರಮುಗ್ಧಗೊಳಿಸಿದರು. ಹಾರ್ಮೋನಿಯಂನಲ್ಲಿ ಹೆಚ್. ತಿಪ್ಪೇಸ್ವಾಮಿ ಮುದ್ದಟನೂರು, ತಬಲಾದಲ್ಲಿ ಯೋಗೇಶ್ ಸಂಗನಕಲ್ಲು ಸಾಥ್ ನೀಡಿದರು.

ಸಿಎ. ಚಿಲಕರಾಯ ಎರ್ರಿಸ್ವಾಮಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿವೇಕ ಮಂಟಪದ ಸಂಯೋಜಕರು ಪ್ರಭುದೇವ ಕಪ್ಪಗಲ್ಲು, ಸಿ.ಎ. ಕೆ.ರಾಜಶೇಖರ, ಸಿಎ ಸಿದ್ಧರಾಮೇಶ್ವರಗೌಡ ಕರೂರು, ಎಬಿವಿಪಿಯ ನಾಗರಾಜ ಬಟಗೇರಾ, ಭರತ್ ತಳವಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande