ಕೂಡ್ಲಿಗಿ ಪೌತಿ ಖಾತೆ ಆಂದೋಲನ
ಕೂಡ್ಲಿಗಿ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೂಡ್ಲಿಗಿ ತಾಲ್ಲೂಕಿನ ಗ್ರಾಮೀಣ ಭಾಗದ ರೈತರ ಜಮೀನಿನ ಹಕ್ಕು ದಾಖಲೆಗಳನ್ನು ಸರಳೀಕರಿಸಲು ಮತ್ತು ಮೃತಪಟ್ಟ ಪಟ್ಟಾದಾರರು ಹೆಸರನ್ನು ತೆಗೆದು ಹಾಕಿ ಅವರ ವಾರಸುದಾರರ ಹೆಸರಿನಲ್ಲಿ ವರ್ಗಾಯಿಸಲು ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ರೈತರು
ಕೂಡ್ಲಿಗಿ ಪೌತಿ ಖಾತೆ ಆಂದೋಲನ


ಕೂಡ್ಲಿಗಿ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೂಡ್ಲಿಗಿ ತಾಲ್ಲೂಕಿನ ಗ್ರಾಮೀಣ ಭಾಗದ ರೈತರ ಜಮೀನಿನ ಹಕ್ಕು ದಾಖಲೆಗಳನ್ನು ಸರಳೀಕರಿಸಲು ಮತ್ತು ಮೃತಪಟ್ಟ ಪಟ್ಟಾದಾರರು ಹೆಸರನ್ನು ತೆಗೆದು ಹಾಕಿ ಅವರ ವಾರಸುದಾರರ ಹೆಸರಿನಲ್ಲಿ ವರ್ಗಾಯಿಸಲು ಪೌತಿ ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ರೈತರು ತಮ್ಮ ಜಮೀನಿನ ಖಾತೆಯನ್ನು ಪೌತಿ (ಮರಣ) ನಂತರ ವಾರಸುದಾರರ ಹೆಸರಿಗೆ ಬದಲಾಯಿಸಿಕೊಳ್ಳಲು ಈ ಕೆಳಕಂಡ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಸಲ್ಲಿಸಬೇಕಾದ ಅಗತ್ಯ ದಾಖಲೆಗಳು :

೧.ಪಹಣಿ : ಜಮೀನಿನ ಇತ್ತೀಚಿನ ಪಹಣಿ ಪ್ರತಿ.

೨.ವಂಶವೃಕ್ಷ : ತಹಶೀಲ್ದಾರ್ ಅಥವಾ ಅಧಿಕೃತ ಮೂಲಗಳಿಂದ ಪಡೆದ ಕುಟುಂಬದ ವಂಶವೃಕ್ಷ.

೩.ಮರಣ ಪ್ರಮಾಣ ಪತ್ರ : ಮೂಲ ಪಟ್ಟಾದಾರರ ಮರಣ ಪ್ರಮಾಣ ಪತ್ರ.

(ಒಂದು ವೇಳೆ ಮರಣ ಪ್ರಮಾಣ ಪತ್ರ ಲಭ್ಯವಿಲ್ಲದಿದ್ದಲ್ಲಿ, ನೋಟರಿಯವರಿಂದ ಮರಣದ ಕುರಿತು ದೃಢೀಕರಿಸಿದ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ).

೪.ಒಪ್ಪಿಗೆ ಪ್ರಮಾಣ ಪತ್ರ : ಕುಟುಂಬದ ಹೆಣ್ಣು ಮಕ್ಕಳು ಖಾತೆಯಿಂದ ಹೆಸರು ಕೈಬಿಟ್ಟು, ವಾರಸುದಾರರ ಹೆಸರಿಗೆ ಖಾತೆ ಮಾಡಲು ನೀಡುವ ಅಧಿಕೃತ ಒಪ್ಪಿಗೆ ಪತ್ರ.

೫.ಆಧಾರ್ ಕಾರ್ಡ್ಗಳು : ಕುಟುಂಬದ ಎಲ್ಲಾ ವಾರಸುದಾರರ ಆಧಾರ್ ಕಾರ್ಡ್ ಪ್ರತಿಗಳು.

ಸಂಪರ್ಕಿಸಬೇಕಾದ ಅಧಿಕಾರಿಗಳು :

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ನಿಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande