
ಗಂಗಾವತಿ, 06 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗಂಗಾವತಿ ತಾಲ್ಲೂಕಿನ ಹೇರೂರ ಗ್ರಾಮದ ಸುಧಾ ಹುಸೇನಪ್ಪ ಕೆಂಚಪ್ಪನವರ ಎಂಬ 23 ವರ್ಷದ ಯುವತಿಯು 2025 ರ ಡಿಸೆಂಬರ್ 25 ರ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.352/2025 ಕಲಂ ಮಹಿಳೆ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವತಿಯ ಚಹರೆ ವಿವರ:
ಯುವತಿಯು 5 ಫೀಟ್ ಎತ್ತರವಿದ್ದು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಪ್ಪು ಉದ್ದನೆ ಕೂದಲು ಇದ್ದು, ಜಡೆ ಹಾಕುತ್ತಾರೆ. ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ. ಯುವತಿಯ ಎಡಗೈ ಮುಂಗೈನಲ್ಲಿ ಇಂಗ್ಲೀಷಿನಲ್ಲಿ Ravi ಅಂತಾ ಹಚ್ಚೆ ಹಾಕಿಸಿಕೊಂಡಿರುತ್ತಾರೆ. ಕಾಣೆಯಾದಾಗ ಸಿಮೆಂಟ್ ಕಲರ್ ನೈಟ್ ಡ್ರೆಸ್ ಹಾಕಿಕೊಂಡಿದ್ದರು.
ಮೇಲ್ಕಂಡ ಚಹರೆಯ ಯುವತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು: 08539-230222, ಪೊಲೀಸ್ ಉಪಾಧೀಕ್ಷಕರು: 08533-230853, ಆರಕ್ಷಕ ನಿರೀಕ್ಷಕರು, ಗಂಗಾವತಿ ಗ್ರಾಮೀಣ ಠಾಣೆ: 08533-230854, 9480803730 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್