ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಜಾಗೃತಿ ; ತುರ್ತು ಅಗತ್ಯ: ಡಾ. ದೇವೀಶ್ ಬಲ್ಲಾಳ್
ಬಳ್ಳಾರಿ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ರೋಗಿಯ ಜೀವವನ್ನು ಖಂಡಿತವಾಗಿಯೀ ಉಳಿಸಬಹುದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ ವಿಭಾಗದ ಸಲಹೆಗಾರರಾಗಿರುವ ಡಾ. ದೇವೇಶ್ ಬಲ್ಲಾಳ್ ಅವರು ತಿಳಿಸ
ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಜಾಗೃತಿ : ತುರ್ತು ಅಗತ್ಯ: ಡಾ. ದೇವೀಶ್ ಬಲ್ಲಾಳ್


ಬಳ್ಳಾರಿ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ರೋಗಿಯ ಜೀವವನ್ನು ಖಂಡಿತವಾಗಿಯೀ ಉಳಿಸಬಹುದಾಗಿದೆ ಎಂದು ಮಣಿಪಾಲ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ಮತ್ತು ರೊಬೊಟಿಕ್ ಸರ್ಜರಿ ವಿಭಾಗದ ಸಲಹೆಗಾರರಾಗಿರುವ ಡಾ. ದೇವೇಶ್ ಬಲ್ಲಾಳ್ ಅವರು ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗಾರರಿಗೆ `ಕರ್ನಾಟಕದಲ್ಲಿ ಮಿತಿ ಮೀರುತ್ತಿರುವ ಕ್ಯಾನ್ಸರ್ ಭೀತಿ: ಜಾಗೃತಿ, ಆರಂಭಿಕ ಪತ್ತೆ ಹಾಗೂ ಒಗ್ಗಟ್ಟಿನ ಹೋರಾಟದ ತುರ್ತು ಅಗತ್ಯ' ವಿಷಯದ ಕುರಿತು ವಿವರಿಸಿದರು.

ರಾಜ್ಯದಲ್ಲಿ ವರದಿಯಾಗುವ ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ. 25 ರಷ್ಟು ಪ್ರಕರಣಗಳಿಗೆ ತಂಬಾಕು ಸೇವನೆಯೇ ನೇರ ಕಾರಣವಾಗಿದೆ. ಅಂದರೆ, ಅಂದಾಜು 22,000 ಕ್ಯಾನ್ಸರ್ ಪ್ರಕರಣಗಳು ನೇರವಾಗಿ ತಂಬಾಕು ಬಳಕೆಯೊಂದಿಗೆ ಸಂಬಂಧ ಹೊಂದಿವೆ. ಇದು ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಜಾಗೃತಿ ಮೂಡಿಸುವ ಬಲವಾದ ಕಾರ್ಯತಂತ್ರಗಳ ತುರ್ತು ಅಗತ್ಯವನ್ನು ಎತ್ತಿತೋರಿಸುತ್ತದೆ ಎಂದು ಹೇಳಿದರು.

ಕ್ಯಾನ್ಸರ್ ತಪಾಸಣಾ ವ್ಯಾಪ್ತಿಯನ್ನು ಹೆಚ್ಚಿಸುವುದು, ತಂಬಾಕು ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಬಲಪಡಿಸುವುದು ಮತ್ತು ವಿಶೇಷವಾಗಿ ಮಹಿಳೆಯರು ಹಾಗೂ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವುದು ಪ್ರಸ್ತುತ ಅನಿವಾರ್ಯವಾಗಿದೆ ಎಂದರು.

ಕರ್ನಾಟಕವು ಕ್ಯಾನ್ಸರ್ನ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. 2024ರ ಅಂಕಿಅಂಶಗಳ ಪ್ರಕಾರ ವಾರ್ಷಿಕವಾಗಿ ಅಂದಾಜು 87,855 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಪೈಕಿ 26,516 ಜನರು ಮೃತರಾಗುತ್ತಿದ್ದಾರೆ.

ರೋಗವನ್ನು ತಡವಾಗಿ ಪತ್ತೆ ಮಾಡುವುದು, ಆಧುನಿಕ ಜೀವನ ಶೈಲಿಯಲ್ಲಿನ ಅಪಾಯಕಾರಿ ಅಂಶಗಳು (ಜಡತ್ವ, ಕಳಪೆ ಆಹಾರ ಪದ್ಧತಿ), ಮತ್ತು ಕ್ಯಾನ್ಸರ್ ತಪಾಸಣೆಯ (ಸ್ಕ್ರೀನಿಂಗ್) ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದರು.

ಆರೋಗ್ಯ ಮೂಲಸೌಕರ್ಯಗಳಲ್ಲಿ ಎಷ್ಟೇ ಪ್ರಗತಿ ಸಾಧಿಸಿದರೂ, ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಇನ್ನೂ ಒಂದು ದೊಡ್ಡ ಸವಾಲಾಗಿದೆ. ನಗರಗಳಲ್ಲಿ ಗರ್ಭಕೋಶದ ಕ್ಯಾನ್ಸರ್ತಪಾಸಣೆಯ ಪ್ರಮಾಣ ಶೇ. 2.4 ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಕೇವಲ ಶೇ. 1.8 ರಷ್ಟಿದೆ ಎಂದರು.

2025 ರ ಅಂತ್ಯದಲ್ಲಿ ಪ್ರಾರಂಭವಾಗಿ ವಿಸ್ತರಿಸಲ್ಪಟ್ಟ 'ಗೃಹ ಆರೋಗ್ಯ' ಯೋಜನೆಯಡಿ, ಪ್ರಮುಖ ಕ್ಯಾನ್ಸರ್ ಚಿಕಿತ್ಸೆಗಾಗಿ 40 ಲಕ್ಷಕ್ಕೂ ಹೆಚ್ಚು ಗ್ರಾಮೀಣರನ್ನು ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಲಾಗಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande