ಬಿಜೆಪಿ ಸ್ಥಾಪನಾ ದಿನ ; ರಾಷ್ಟ್ರಸೇವೆಯ ದೀಕ್ಷೆಯೊಂದಿಗೆ ವಿಜಯ ಸಂಕಲ್ಪ : ವಿಜಯೇಂದ್ರ
ದಾವಣಗೆರೆ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಷ್ಟ್ರಸೇವೆಯ ದೀಕ್ಷೆ, ಅಂತ್ಯೋದಯದ ದೃಢ ಸಂಕಲ್ಪ ಹಾಗೂ ಕೋಟ್ಯಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಪ್ರತಿರೂಪವೇ ಭಾರತೀಯ ಜನತಾ ಪಾರ್ಟಿ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ದಾವಣಗೆರೆಯಲ್ಲಿ ಸೋಮವಾರ ಪಕ್ಷದ ‘ಸ್ಥಾಪನಾ
Byv


ದಾವಣಗೆರೆ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಸೇವೆಯ ದೀಕ್ಷೆ, ಅಂತ್ಯೋದಯದ ದೃಢ ಸಂಕಲ್ಪ ಹಾಗೂ ಕೋಟ್ಯಂತರ ಕಾರ್ಯಕರ್ತರ ನಿಸ್ವಾರ್ಥ ಸೇವೆಯ ಪ್ರತಿರೂಪವೇ ಭಾರತೀಯ ಜನತಾ ಪಾರ್ಟಿ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸೋಮವಾರ ಪಕ್ಷದ ‘ಸ್ಥಾಪನಾ ದಿನ’ವನ್ನು ಸಂಭ್ರಮದಿಂದ ಆಚರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಉಪಚುನಾವಣೆಯ ವಿಜಯದ ಸಂಕಲ್ಪದೊಂದಿಗೆ ಪಕ್ಷದ ಸಿದ್ಧಾಂತ ಮತ್ತು ಜನಸೇವೆಯ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸೋಣ ಎಂದು ಕರೆ ನೀಡಿದರು. ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುವ ಸಂಕಲ್ಪವನ್ನು ಕಾರ್ಯಕರ್ತರಲ್ಲಿ ತುಂಬುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದರು.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹಾಗೂ ಪಕ್ಷಕ್ಕೆ ಸದಾ ಬೆಂಬಲ ನೀಡುತ್ತಿರುವ ನಾಗರಿಕ ಬಂಧುಗಳಿಗೂ ಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ಜನಸಂಘದ ಕಾಲದಿಂದಲೇ ಸಂಘಟನೆಗಾಗಿ ದುಡಿದ ಹಿರಿಯ ಕಾರ್ಯಕರ್ತರಾದ ಸೋಮನಾಥಯ್ಯ, ವೈ. ಮಲ್ಲೇಶ್, ಶಂಕರನಾರಾಯಣ ಹಾಗೂ ಭೂದಾಳ್ ವೀರಭದ್ರಪ್ಪ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಲಾಯಿತು. ಅವರ ಪರಿಶ್ರಮವೇ ಪಕ್ಷದ ಇಂದಿನ ಶಕ್ತಿಗೆ ಪೂರಕವಾಗಿದೆ ಎಂದು ವಿಜಯೇಂದ್ರ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande