ಅಭಿವೃದ್ಧಿಶೀಲ ರಾಜಕೀಯ ಮಾರ್ಗದಲ್ಲಿ ಸದಾ ಮುನ್ನಡೆಯುವ ಪಕ್ಷ ಬಿಜೆಪಿ
ಗದಗ, 06 ಏಪ್ರಿಲ್ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ 46ನೇ ಸಂಸ್ಥಾಪನಾ ದಿನವನ್ನು ಧ್ವಜಾರೋಹಣದ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ತೋಟಪ್ಪ (ರಾಜು) ಕುರುಡಗಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪಕ್ಷವನ್ನು ಬೆಂಬಲ
ಫೋಟೋ


ಗದಗ, 06 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ 46ನೇ ಸಂಸ್ಥಾಪನಾ ದಿನವನ್ನು ಧ್ವಜಾರೋಹಣದ ಮೂಲಕ ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲಾಧ್ಯಕ್ಷರಾದ ತೋಟಪ್ಪ (ರಾಜು) ಕುರುಡಗಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪಕ್ಷವನ್ನು ಬೆಂಬಲಿಸುತ್ತಿರುವ ನಾಗರಿಕರಿಗೆ ಹಾಗೂ ಕಾರ್ಯಕರ್ತರಿಗೆ ಸ್ಥಾಪನಾ ದಿನದ ಶುಭಾಶಯಗಳನ್ನು ತಿಳಿಸಿದರು. “1980ರಲ್ಲಿ ಕೇವಲ ಇಬ್ಬರು ಸದಸ್ಯರಿಂದ ಆರಂಭವಾದ ಪಕ್ಷದ ಪಯಣ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಲಾಗಿದೆ. ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದ ಹಾಗೂ ಶ್ರೇಷ್ಠ ನಾಯಕರ ನೇತೃತ್ವವೇ ಇದಕ್ಕೆ ಕಾರಣ,” ಎಂದು ಹೇಳಿದರು.

ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರದಲ್ಲಿ ಸತತ ಮೂರನೇ ಬಾರಿ ಸರ್ಕಾರ ರಚನೆಯಾಗಿದ್ದು, 21 ರಾಜ್ಯಗಳಲ್ಲಿ ಎನ್ಡಿಎ ಆಡಳಿತದ ಮೂಲಕ ಬಿಜೆಪಿ ಇಂದು ಭಾರತೀಯರ ಭರವಸೆಯಾಗಿದೆ ಎಂದು ಅವರು ತಿಳಿಸಿದರು. “ಇದು ಕೇವಲ ರಾಜಕೀಯ ಪಯಣವಲ್ಲ, ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದೊಂದಿಗೆ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ,” ಎಂದರು.

ವಿಧಾನ ಪರಿಷತ್ ಸದಸ್ಯರಾದ ಎಸ್.ವಿ. ಸಂಕನೂರ ಮಾತನಾಡಿ, “ರಾಷ್ಟ್ರ ಸೇವೆಯ ಧ್ಯೇಯದೊಂದಿಗೆ ಸ್ಥಾಪನೆಯಾದ ಬಿಜೆಪಿ ಇಂದು ದೇಶದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ. ಹಿರಿಯ ನಾಯಕರ ತ್ಯಾಗ, ಕಾರ್ಯಕರ್ತರ ಸಮರ್ಪಣೆ ಮತ್ತು ಶ್ರಮವೇ ಪಕ್ಷದ ಬಲ,” ಎಂದು ಹೇಳಿದರು.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಅಡ್ವಾಣಿ ಅವರ ದೂರದೃಷ್ಟಿಯ ನಾಯಕತ್ವದಿಂದ ಬೆಳೆದ ಸಂಘಟನೆ ಇಂದು ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಮುಖಂಡರಾದ ಎಂ.ಎಸ್. ಕರೀಗೌಡ್ರ ಮಾತನಾಡಿ, ಸಾಮಾನ್ಯ ಜನರ ಆಶಯಗಳನ್ನು ನೆರವೇರಿಸುವ ದಿಸೆಯಲ್ಲಿ ಬಿಜೆಪಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎಲ್ಲರೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಇನ್ನಷ್ಟು ಸಮರ್ಪಿತವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ಉಡುಪಿ, ಜಗನ್ನಾಥಸಾ ಭಾಂಡಗೆ, ಬಿ.ಎಚ್. ಲದ್ವಾ, ಎಂ.ಎಂ. ಹಿರೇಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ, ಸಿದ್ದು ಪಲ್ಲೇದ, ರವಿ ದಂಡಿನ, ಶಂಕರ ಕಾಕಿ, ಸುರೇಶ ಚಿತ್ತರಗಿ, ಅನೀಲ ಅಬ್ಬಿಗೇರಿ, ಶಶಿಧರ ದಿಂಡೂರ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ, ನಾಗರಾಜ ತಳವಾರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ವಿಶ್ವನಾಥ ಟೆಂಗಿನಕಾಯಿ, ಕೇಶವ ಕೋಟ್ನಿಕಲ್, ವಿಜಯಲಕ್ಷ್ಮೀ ಮಾನ್ವಿ, ಪದ್ಮೀನಿ ಮುತ್ತಲದಿನ್ನಿ, ಪುಷ್ಪಾ ಪೂಜಾರ, ರೇಖಾ ಗವಳಿ, ಕಮಲಾಕ್ಷೀ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ಶಿವಲೀಲಾ ಉಮಚಗಿ, ಯೋಗೇಶ್ವರಿ ಭಾವಿಕಟ್ಟಿ, ಶ್ರೀದೇವಿ ಲಖಮಾಪೂರ, ನೇತ್ರಾವತಿ ಜೋಗಿನ್, ಸಂಕೇತಾ ಶಿದ್ಲಿಂಗ್, ಎಸ್.ಪಿ. ಹೊಂಬಳ, ಆರ್.ಬಿ. ಹಾದಿಮನಿ, ಬಸವರಾಜ ನರೆಗಲ್, ವಿರೇಶಪ್ರಭು ಗದಗಿನ, ಮಂಜುನಾಥ, ವಿನೋದ ಹಂಸನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಾತಿ ಅಕ್ಕಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande