
ನವದೆಹಲಿ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ನರೇಂದ್ರ ಮೋದಿ ಅವರು ಈಸ್ಟರ್ ಹಬ್ಬದ ಅಂಗವಾಗಿ ದೇಶದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಪವಿತ್ರ ದಿನವು ಭರವಸೆ ಮತ್ತು ನವೀಕರಣವನ್ನು ಆಚರಿಸುವುದಾಗಿ ತಿಳಿಸಿದ ಪ್ರಧಾನಿ, ಇದು ಪ್ರತಿಯೊಬ್ಬರ ಜೀವನಕ್ಕೂ ಶಾಂತಿ, ಸಂತೋಷ ಮತ್ತು ಪ್ರಕಾಶವನ್ನು ತರಲಿ ಎಂದು ಹಾರೈಸಿದ್ದಾರೆ.
ಯೇಸುಕ್ರಿಸ್ತ ಅವರ ಬೋಧನೆಗಳು ಎಲ್ಲರೂ ದಯೆಯಿಂದ ವರ್ತಿಸಲು ಹಾಗೂ ಸಮಾಜದಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬಲಪಡಿಸಲು ಪ್ರೇರೇಪಿಸಲಿ ಎಂದು ಎಕ್ಸನಲ್ಲಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa