
ನವದೆಹಲಿ, 05 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದೇಶದ ಪ್ರಮುಖ ಬಂದರುಗಳು 2025-26ನೇ ಆರ್ಥಿಕ ವರ್ಷದಲ್ಲಿ 915.17 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿವೆ. ಇದು ಕಳೆದ ವರ್ಷದ 854.86 ಮಿಲಿಯನ್ ಟನ್ಗಳಿಗಿಂತ ಶೇ.7.06ರಷ್ಟು ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದ್ದ 904 ಮಿಲಿಯನ್ ಟನ್ ಗುರಿಯನ್ನು ಮೀರಿದೆ.
ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಪ್ರಕಾರ, ಬಂದರು ಸಾಮರ್ಥ್ಯ ವೃದ್ಧಿ, ಕಾರ್ಯಾಚರಣೆಯ ದಕ್ಷತೆ, ಸುಧಾರಿತ ಲಾಜಿಸ್ಟಿಕ್ಸ್ ವ್ಯವಸ್ಥೆ ಹಾಗೂ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯು ಈ ಸಾಧನೆಗೆ ಪ್ರಮುಖ ಕಾರಣಗಳಾಗಿವೆ. ಬಂದರು ಆಧಾರಿತ ಅಭಿವೃದ್ಧಿ ನೀತಿ, ಬಹುಮಾದರಿ ಸಂಪರ್ಕ ಮತ್ತು ಡಿಜಿಟಲ್ ಉಪಕ್ರಮಗಳು ಬಂದರುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ.
ಈ ಸಾಧನೆಯನ್ನು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸರ್ಕಾರದ ನಿರಂತರ ಸುಧಾರಣಾ ಕ್ರಮಗಳ ಫಲವೆಂದು ಬಣ್ಣಿಸಿದ್ದು,ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಂದರು ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಜಾರಿಯಾಗಿವೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa