ಕೋಲಾರ ಜಿಲ್ಲಾದ್ಯಂತ ನಡೆದ ಸಾಕ್ಷರತಾ ಯೋಜನೆಯ ಮೌಲ್ಯ ಮಾಪನ
ಕೋಲಾರ ಜಿಲ್ಲಾದ್ಯಂತ ನಡೆದ ಸಾಕ್ಷರತಾ ಯೋಜನೆಯ ಮೌಲ್ಯ ಮಾಪನ
ಸಾಕ್ಷರತಾ ಯೋಜನೆಯ ಮೌಲ್ಯಮಾಪನದಲ್ಲಿ ಕೋಲಾರದಲ್ಲಿ ನವ ಸಾಕ್ಷರರು ಪಾಲ್ಗೊಂಡಿದ್ದರು.


ಕೋಲಾರ, ೦೫ ಏಪ್ರಿಲ್ (ಹಿ.ಸ) :

ಆ್ಯಂಕರ್ : ಪ್ರಸಕ್ತ ಸಾಲಿನ ಕೇಂದ್ರ ಪುರಸ್ಕೃತ ಉಲ್ಲಾಸ್ ನವಭಾರತ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲಾದ್ಯಂತ ಒಟ್ಟು ೩೨ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ೧೮೯ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಸಾಕ್ಷರತಾ ಮೌಲ್ಯ ಮಾಪನ ನಡೆಯಿತು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಉಮಾ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಪಿ.ಬಾಗೇವಾಡಿ ಅವರ ಮಾರ್ಗದರ್ಶನದಲ್ಲಿ ಭಾನುವಾರ ಜಿಲ್ಲಾಧ್ಯಂತ ಪರೀಕ್ಷೆ ನಡೆದಿದ್ದು, ೨೦೨೫-೨೬ ನೇ ಸಾಲಿನಲ್ಲಿ ಜಿಲ್ಲೆಯ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ೩೨ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಲಿಂಕ್ ಡಾಕ್ಯುಮೆಂಟ್ ಅನುದಾನದಡಿಯಲ್ಲಿ ೬೦೦೦ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಗುರಿಯೊಂದಿಗೆ ಮೂಲ ಸಾಕ್ಷರತಾ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗಿದೆ. ಭಾನುವಾರದ ಮೌಲ್ಯಮಾಪನ ಪರೀಕ್ಷೆಯಲ್ಲಿ ೬೦೦೦ ಕಲಿಕಾರ್ಥಿಗಳು ನವ ಸಾಕ್ಷರಾಗುತ್ತಾರೆ. ಎಂದ ಅವರು, ೨೦೨೫-೨೬ನೇ ಸಾಲಿನ ಜಿಲ್ಲೆಯ ಲಿಂಕ್ ಡಾಕ್ಯೂಮೆಂಟ್ ಅನುದಾನದಡಿಯಲ್ಲಿ ಸಾಕ್ಷರತಾ ಕಾರ್ಯಕ್ರಮಕ್ಕೆ ಜಿಲ್ಲೆಯ ೬ ತಾಲ್ಲೂಕುಗಳ ಆಯ್ದ ೩೨ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು ೬೦೦೦ ಅನಕ್ಷರಸ್ಥರಿಗೆ ೧೮೯ ಪರೀಕ್ಷಾ ಕೇಂದ್ರಗಳುಲ್ಲಿ ಪರೀಕ್ಷೆ ಇಂದು ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಪರೀಕ್ಷೆ ಕಾಂiÀiðದ ಉಸ್ತುವಾರಿ ವಹಿಸಿದ್ದು, ೦೩ ಅವಧಿಗಳಲ್ಲಿü ಪರೀಕ್ಷೆ ನಡೆಯಿತು ಎಂದು ತಿಳಿಸಿದರು.

ಬಂಗಾರಪೇಟೆ ತಾಲ್ಲೂಕಿನ ೪ ಗ್ರಾ.ಪಂಗಳ ೨೬ ಪರೀಕ್ಷಾ ಕೇಂದ್ರಗಳಲ್ಲಿ ೧ ಸಾವಿರ ಕಲಿಕಾರ್ಥಿಗಳು,ಕೆಜಿಎಫ್ ತಾಲ್ಲೂಕಿನಲ್ಲಿ ೩ ಗ್ರಾ.ಪಂಗಳ ೫ ಪರೀಕ್ಷಾ ಕೇಂದ್ರಗಳಲ್ಲಿ ೨೫೦ ಕಲಿಕಾರ್ಥಿಗಳು, ಕೋಲಾರ ತಾಲ್ಲೂಕಿನ ೧೩ ಗ್ರಾ.ಪಂಗಳಲ್ಲಿ ೭೪ ಪರೀಕ್ಷಾ ಕೇಂದ್ರಗಳಲ್ಲಿ ೧೭೫೦ ಕಲಿಕಾರ್ಥಿಗಳು, ಮಾಲೂರು ತಾಲ್ಲೂಕಿನ ೪ ಗ್ರಾ.ಪಂಗಳಿAದ ೩೫ ಕೇಂದ್ರಗಳಲ್ಲಿ ೧ಸಾವಿರ ಮಂದಿ, ಮುಳಬಾಗಿಲು ತಾಲ್ಲೂಕಿನ ೬ ಗ್ರಾ.ಪಂಗಳಲ್ಲಿ ೪೬ ಪರೀಕ್ಷಾ ಕೇಂದ್ರಗಳಲ್ಲಿ ೧೭೫೦ ಮಂದಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ೨ ಗ್ರಾ.ಪಂಗಳಿ0ದ ೩ ಪರೀಕ್ಷಾ ಕೇಂದ್ರಗಳಲ್ಲಿ ೨೫೦ ಮಂದಿ ಪರೀಕ್ಷೆ ಬರೆದಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande