ಗಂಗಾವತಿಯಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ 5ನೇ ರಾಜ್ಯ ಸಮಾವೇಶ
ಗಂಗಾವತಿ, 05 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘವು ಗಂಗಾವತಿಯ ತಾಲೂಕಾ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಏಪ್ರಿಲ್ 07 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿದ್ದು, ಆಸ
ಗಂಗಾವತಿಯಲ್ಲಿ ಶ್ರಮಜೀವಿ ಕಟ್ಟಡ ಕಾರ್ಮಿಕರ 5ನೇ ರಾಜ್ಯ ಸಮಾವೇಶ


ಗಂಗಾವತಿ, 05 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸೇವಾ ಸಂಘವು ಗಂಗಾವತಿಯ ತಾಲೂಕಾ ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಏಪ್ರಿಲ್ 07 ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಂಡಿದ್ದು, ಆಸ್ಪತ್ರೆ ಸರ್ವ ಸಿಬ್ಬಂದಿಗೆ ಸನ್ಮಾನ ಹಾಗು ಖ್ಯಾತ ವೈದ್ಯಾಧಿಕಾರಿ ಈಶ್ವರ ಸವಡಿಯವರಿಗೆ ಶ್ರಮಜೀವಿ ಕಾಯಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥಾಪಕ ರಾಜ್ಯಧ್ಯಕ್ಷ ಶಿವಕುಮಾರಗೌಡ ತಿಳಿಸಿದರು.

ಅವರು, ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಟಿಯ್ನನುದೇಶಿಸಿ ಮಾತನಾಡಿದರು. ಕರೋನಾ ಹಾಗು ಇತರೆ ತುರ್ತು ಸಂರ್ಭದಲ್ಲಿ ವೈದ್ಯರು ಹಾಗು ಸಿಬ್ಬಂದಿ ತಮ್ಮ ಪ್ರಾಣ ಲೆಕ್ಕಿಸದೆ ಸಮಾಜಕ್ಕೆ ಸೇವೆ ಸಲ್ಲಿಸಿದ್ದು, ಗಂಗಾವತಿ ಆಸ್ಪತ್ರೆಯು ರಾಜ್ಯಕ್ಕೆ ಮಾದರಿಯಾಗಿದೆ ಹೀಗಾಗಿ ಆಸ್ಪತ್ರೆಯ ಸರ್ವ ಸಿಬ್ಬಂದಿ ಸೇವಾ ಮನೋಭಾವ ಗಮನಿಸಿ ಸನ್ಮಾನಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಕಾರ್ಮಿಕರ ಹಲವು ಬೇಡಿಕೆ ಈಡೇರಿಕೆ ಕುರಿತು ಗಮನ ಸೆಳೆಯಲಾಗುವುದು, ಕಾರ್ಮಿಕರಿಗೆ ಇಎಸ್ಐ ಸೌಲಭ್ಯ, ಸೂಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಅವಕಾಶ ನೀಡಬೇಕು ಮತ್ತು ವೈದ್ಯಕೀಯ ವೆಚ್ಚ ಚಿಕಿತ್ಸೆಯ ಹಂತದಲ್ಲೇ ನೀಡಬೇಕು ಎರಡು ಲಕ್ಷದಿಂದ ಏಳು ಲಕ್ಷಕ್ಕೆ ಏರಿಸಬೇಕು, ಮಕ್ಕಳ ವಿದ್ಯಾಭ್ಯಾಸದ ಸ್ಕಾಲರ್ ಶಿಪ್ ಕಡಿತಗೊಳಿಸಿದ್ದು, ಹೆಚ್ಚಳಗೊಳಿಸಿದರೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮದುವೆ ವೆಚ್ಚ ಕೇವಲ 60 ಸಾವಿರ ನೀಡಲಾಗುವುದು. ಇದನ್ನು ಎರಡು ಲಕ್ಷಕ್ಕೆ ಏರಿಸಬೇಕೆಂದು ಹಲವು ಬಾರಿ ಮನವಿ ಮಾಡಿದರು ಸರಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಶೀಘ್ರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.

ಕೊಪ್ಪಳ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಂಪಾಪತಿ ಇಂಗಳಗಿ ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಸಾವಿರಾರು ಕಾರ್ಮಿಕರು ಗಣ್ಯರು ಆಗಮಿಸಲಿದ್ದಾರೆ, ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕಾರ್ಮಿಕ ಇಲಾಖೆ ಜಿಲ್ಲಾ ಅಧಿಕಾರಿ ಸುಧಾ ಹಾಗು ತಾಲೂಕು ಅಧಿಕಾರಿ ಎಂ.ಅಶೋಕ್ ಇವರು ಆಗಮಿಸಲಿದ್ದಾರೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದು ಮನವಿ ಮಾಡಿದರು.

ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಮೇಸ್ತ್ರಿ, ರಾಜ್ಯ ಖಜಾಂಚಿ ವೀರೇಶ್ ಕಂದಗಲ್, ಪದಾಧಿಕಾರಿಗಳಾದ ಮಾರೇಶ್ ಮೇಸ್ತ್ರಿ, ಸುಕುಮುನಿ, ಚಂದಪ್ಪ, ಹನುಮಂತ ಮೇಸ್ತ್ರಿ, ಮಹೇಶ್ ಮೇಸ್ತ್ರಿ, ರಘುನಾಥ, ಶ್ರೀನಿವಾಸ್ ಮೇಸ್ತ್ರಿ, ಇಮಾಮ್ಸಾಬ್ ವಡ್ಡರಹಟ್ಟಿ ಇತರರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande