ಚಂದ್ರಬ0ಡ : ಜಯಲಮ್ಮಕಾಣೆ, ಪತ್ತೆಗೆ ಮನವಿ
ರಾಯಚೂರು, 04 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಯಚೂರು ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆಯ ವ್ಯಾಪ್ತಿಯ ಚಂದ್ರಬ0ಡ ಗ್ರಾಮದ ನಿವಾಸಿಯಾದ ಜಯಲಮ್ಮ ಗಂಡ ಹೊನ್ನಪ್ಪ (31) ಎಂಬ ಮಹಿಳೆಯು 2025ರ ಆಗಸ್ಟ್ 12ರ ಬೆಳಿಗ್ಗೆ 9ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗುತ್ತೇನೆಂದು ಹೋದವು ಮರಳಿ ಮನೆಗೆ ಬಾರದೆ ಕ
ಚಂದ್ರಬ0ಡ : ಜಯಲಮ್ಮಕಾಣೆ : ಪತ್ತೆಗೆ ಮನವಿ


ರಾಯಚೂರು, 04 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಯಚೂರು ತಾಲೂಕಿನ ಯಾಪಲದಿನ್ನಿ ಪೊಲೀಸ್ ಠಾಣೆಯ ವ್ಯಾಪ್ತಿಯ ಚಂದ್ರಬ0ಡ ಗ್ರಾಮದ ನಿವಾಸಿಯಾದ ಜಯಲಮ್ಮ ಗಂಡ ಹೊನ್ನಪ್ಪ (31) ಎಂಬ ಮಹಿಳೆಯು 2025ರ ಆಗಸ್ಟ್ 12ರ ಬೆಳಿಗ್ಗೆ 9ಗಂಟೆಯ ಸುಮಾರಿಗೆ ಹೊಲಕ್ಕೆ ಹೋಗುತ್ತೇನೆಂದು ಹೋದವು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಠಾಣೆಯಲ್ಲಿ ಗುನ್ನೆ ನಂ: 66/2025 ಕಲಂರಡಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಎಂದು ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದ ಮಹಿಳೆಯು ಚಂದ್ರಬ0ಡ ಸೀಮಾದ ಸರ್ವೆ ನಂಬರ್: 269/1 ಹೊಲದಲ್ಲಿ ಕೆಲಸಕ್ಕೆ ಹೊಗಿದ್ದು, ಸಂಜೆ 6ಗಂಟೆ ಸುಮಾರಿಗೆ ಮನೆಗೆ ಕರೆದುಕೊಂಡು ಬರಲು ಹೋದಾಗ ಮಹಿಳೆಯು ಹೊಲದಲ್ಲಿ ಇರಲಿಲ್ಲ. ಅಕ್ಕಪಕ್ಕದ ಊರಿಗಳಾದ ಗಣಮೂರು, ರಾಯಚೂರು, ಸಿಂಗನೋಡಿ, ಮಂತ್ರಾಲಯ, ಮಾದವರಂ, ಗಿಲ್ಲೆಸ್ಗೂರಿನಲ್ಲಿ ವಿಚಾರಿಸಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ.

ಚರಹೆ: ಕಾಣೆಯಾದ ಮಹಿಳೆಯ ವಯಸು 31, ಮತ್ತು ಮುಖ ಕೆಂಪು ಮೈ ಬಣ್ಣ, ದುಂಡನೆಯ ಮುಖ, ತಲೆಯಲ್ಲಿ ಉದ್ದನೇಯ ಕಪ್ಪು ಕೂದಲು, ಕಪ್ಪು ಚುಕ್ಕೆಯ ಸೀರೆ ಕಪ್ಪು ಬಣ್ಣದ ಕುಪ್ಪಸ ಧರಿಸಲಾಗಿದ್ದು, ಕನ್ನಡ, ತೆಲುಗು ಭಾಷೆ ಮಾತನಾಡುತ್ತಾಳೆ.

ಈ ಕಾಣೆಯಾದ ಮಹಿಳೆಯ ಬಗ್ಗೆ ಸುಳಿವು ಸಿಕ್ಕಲಿ ಯಾಪಲದಿನ್ನಿ ಠಾಣೆ ಪಿಎಸ್ಐ ಮೊಬೈಲ್ ಸಂಖ್ಯೆ: 9480803851, ಸಿ.ಪಿ.ಐ ಗ್ರಾಮೀಣ ವೃತ್ತ ಮೊಬೈಲ್ ಸಂಖ್ಯೆ: 9480803832, ಕಂಟ್ರೋಲ ರೂಂ ದೂರವಾಣಿ ಸಂಖ್ಯೆ: 08532-235635, 9480803832ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಯಾಪಲದಿನ್ನಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande