

ಕೋಲಾರ, 0೪ ಏಪ್ರಿಲ್ (ಹಿ. ಸ.) :
ಆ್ಯಂಕರ್ : ಜಿಲ್ಲೆಯಾದ್ಯಂತ ಇರುವ ಪಾನ್ಬ್ರೋಕರ್ ಹಾಗೂ ಗಿರವಿ ಅಂಗಡಿಗಳಿಂದ ಅಮಾಯಕ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ಮೋಸ ಮತ್ತು ವಂಚನೆ ತಡೆಯುವಂತೆ ಕೋಲಾರ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ನಮ್ಮ ಕೋಲಾರ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ನಮವಿಯಲ್ಲಿ ಕೋಲಾರ ಜಿಲ್ಲೆಯಾದ್ಯಂತ ಇರುವ ಬಹುತೇಕ ಪಾನ್ಬ್ರೋಕರ್ ಹಾಗೂ ಗಿರವಿ ಅಂಗಡಿ ಮಾಲೀಕರು ಅಮಾಯಕ ರೈತರು ಹಾಗೂ ಸಾರ್ವಜನಿಕರು ಮತ್ತು ಅನಕ್ಷರಸ್ಥರಿಂದ ಬಂಗಾರದ ಆಭರಣಗಳನ್ನು ಗಿರವಿ ಇಡಿಸಿಕೊಳ್ಳುವಾಗ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲು ತಮಗೆ ಇ?ಬಂದ ಹಾಗೆ ಬಿಳಿ ಚೀಟಿಗಳಲ್ಲಿ ಬರೆದುಕೊಡುತ್ತಾರೆ. ಕೆಲವು ತಿಂಗಳು ಕಳೆದ ಮೇಲೆ ಗಿರವಿ ಇಟ್ಟಿರುವವರು ನಿಧನರಾದರೆ ಅವರ ವಾರಸುದಾರರು ಹೋಗಿ ಕೇಳಿದರೆ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ನಿಮ್ಮ ಕೈಯಲ್ಲಿ ಏನು ಆಗುತ್ತೋ ಅದನ್ನು ಮಾಡಿಕೊಳ್ಳಿ ಎಂದು ಬೇಜವಾಬ್ದಾರಿತನ ಹಾಗೂ ಉಡಾಪೆಯಿಂದ ಉತ್ತರ ನೀಡುತ್ತಾರೆ. ಇದಕ್ಕೆ ಉದಾಹರಣೆಯಾಗಿ ಬೇತಮಂಗಲದ ಮಾತಾಜಿ ಪಾನ್ ಬ್ರೋಕರ್ ಎಂಬ ಅಂಗಡಿ ಕೋಲಾರ ತಾಲ್ಲೂಕು ಹಾಗೂ ಕೆ.ಜಿ.ಎಫ್ ತಾಲ್ಲೂಕಿನ ಕೆಲವು ಗ್ರಾಮಗಳ ಅಮಾಯಕರು ಇವರ ಅಂಗಡಿಯಲ್ಲಿ ಗಿರವಿ ಇಟ್ಟಿದ್ದು, ಬಳಿಕ ಒಡವೆ ಬಿಡಿಸಿಕೊಳ್ಳಲು ಹೋದಾಗ ಅವರು ನೀಡಿದ ದಾಖಲೆಗಳು ಸುಳ್ಳು ಎಂದು ಹೇಳಿ ಅವರಿಗೆ ವಂಚನೆ ಮಾಡಿದ್ದು, ಇದರಿಂದ ಬಂಗಾರ ಗಿರವಿ ಇಟ್ಟಿರುವವರು ತಮಗೆ ವಂಚನೆಯಾಗಿರುವ ಬಗ್ಗೆ ಹೇಳಿದ್ದಾರೆ.
ಮಾತಾಜಿ ಪಾನ್ ಬ್ರೋಕರ್ ಮಾಲೀಕ ಕಲ್ಯಾಣ್ ಸಿಂಗ್ ಬಿನ್ ದುರ್ಗಾರಾಮ್ ಜಿ ರವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಮತ್ತು ಜಿಲ್ಲೆಯಾದ್ಯಂತ ಇರುವ ಪಾನ್ಬ್ರೋಕರ್ ಮತ್ತು ಗಿರವಿ ಅಂಗಡಿಗಳಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ವಂಚನೆಯಿಂದ ಮುಕ್ತಿ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ, ಜಿಲ್ಲಾ ಗೌರವಾಧ್ಯಕ್ಷ ಕೆಂಬೋಡಿ ಕೃಷ್ಣೇಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ಅಗ್ರಹಾರಸೋಮರಸನಹಳ್ಳಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಯಲವಾರ ವಿಶ್ವನಾಥಗೌಡ ಸಂಚಾಲಕರಾದ ಅಬ್ಬಣಿ ಮುನೇಗೌಡ, ಕಾರ್ಯಾಧ್ಯಕ್ಷ ಆನಂದಗೌಡ, ಸಂಘಟನಾ ಕಾರ್ಯದರ್ಶಿ ಮಾರ್ಜೇನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಳಲಿ ನಾರಾಯಣಪ್ಪ, ಖಜಾಂಚಿ, ತಿಮ್ಮಾಪುರ ನಾಗರಾಜ್, ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ನಾಗೇಶ್ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್