ಹುಬ್ಬಳ್ಳಿಯಲ್ಲಿ ‘ಲವ್ ಜಿಹಾದ್’ ಆರೋಪ ; ಎರಡು ಕುಟುಂಬಗಳ ನಡುವೆ ಗಲಾಟೆ, ಯುವಕ ಪೊಲೀಸರ ವಶಕ್ಕೆ
ಹುಬ್ಬಳ್ಳಿ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿ ನಗರದಲ್ಲಿ ‘ಲವ್ ಜಿಹಾದ್’ ಆರೋಪದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಮ್ನಲ್ಲಿ ಪರಿಚಯವಾಗಿದ್ದ ಯುವಕ–ಯುವತಿಯ ಸ್ನೇಹ ವಿಚಾರವು ದೊಡ್ಡ ಗಲಾಟೆಗೆ ತಿರುಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ವಶಕ್ಕೆ
Violence


ಹುಬ್ಬಳ್ಳಿ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿ ನಗರದಲ್ಲಿ ‘ಲವ್ ಜಿಹಾದ್’ ಆರೋಪದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಮ್ನಲ್ಲಿ ಪರಿಚಯವಾಗಿದ್ದ ಯುವಕ–ಯುವತಿಯ ಸ್ನೇಹ ವಿಚಾರವು ದೊಡ್ಡ ಗಲಾಟೆಗೆ ತಿರುಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಎರಡೂ ಕುಟುಂಬಗಳ ನಡುವೆ ತೀವ್ರ ಆರೋಪ–ಪ್ರತ್ಯಾರೋಪಗಳು ಕೇಳಿಬರುತ್ತಿವೆ.

ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಮುಲ್ಲಾ ಎಂಬ ಯುವಕನನ್ನು ಕೆಲ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಿಡಿದು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಜಿಮ್ನಲ್ಲಿ ಪರಿಚಯವಾಗಿದ್ದ ಯುವತಿ ಮತ್ತು ಸಮೀರ್ ನಡುವಿನ ಸ್ನೇಹವನ್ನು ‘ಲವ್ ಜಿಹಾದ್’ ಎಂದು ಆರೋಪಿಸಿರುವುದು ಈ ಗಲಾಟೆಗೆ ಕಾರಣವಾಗಿದೆ.

ಈ ಘಟನೆ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿ, ಯುವತಿಯ ಮನೆಯವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.

ಇನ್ನೊಂದೆಡೆ, ಸಮೀರ್ ಅಪಹರಣಗೊಂಡಿದ್ದಾನೆಂದು ಆರೋಪಿಸಿ ಅವನ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸಮೀರ್ ಮೇಲೆ ನೂರಾರು ಜನರಿಂದ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯುವತಿಯ ತಂದೆ ವಿಜಯ, “ಸಮೀರ್ ನಮ್ಮ ಮಗಳಿಗೆ ಜಿಮ್ನಲ್ಲಿ ಪರಿಚಯವಾಗಿ ಮೋಸ ಮಾಡಿದ್ದಾರೆ. ಲವ್ ಜಿಹಾದ್ ಉದ್ದೇಶದಿಂದಲೇ ಈ ಸಂಬಂಧ ಬೆಳೆಸಲಾಗಿದೆ. ನಮ್ಮ ಮನೆಗೆ ತಲ್ವಾರ್ ಹಿಡಿದು ಬಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಸಮೀರ್ ಸಹೋದರಿ ತೈಸಿಮ್ ಮುಲ್ಲಾ, “ನನ್ನ ತಮ್ಮ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದರು. ಇಬ್ಬರ ಕುಟುಂಬಗಳ ನಡುವೆ ಸ್ನೇಹವೂ ಇತ್ತು. ಬೆಳಿಗ್ಗೆ ನಮ್ಮ ತಮ್ಮನನ್ನು ಕೆಲವರು ಅಪಹರಿಸಿ ಹಲ್ಲೆ ನಡೆಸಿದ್ದಾರೆ. ನಾವು ಹುಡುಗಿಯ ಮನೆಗೆ ಹೋದಾಗ ಅಲ್ಲೂ ಗಲಾಟೆ ನಡೆದಿದೆ. ಈಗಾಗಲೇ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೆಲವು ಹಿಂದೂ ಪರ ಸಂಘಟನೆಗಳು “ಜಿಮ್ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ” ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಇದೇ ವೇಳೆ ಸಂತ್ರಸ್ತ ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಮತ್ತು ಬರುವ ಔಷಧಿ ನೀಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾಳೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲ ಅಂಶಗಳನ್ನು ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ. ವಾಸ್ತವಾಂಶ ಬಹಿರಂಗವಾಗುವವರೆಗೆ ಸಾರ್ವಜನಿಕರು ಶಾಂತಿ ಕಾಪಾಡುವಂತೆ ಹುಬ್ಬಳ್ಳಿ ಧಾರವಾಡ ಪೋಲಿಸ ಆಯುಕ್ತ ಶಶಿಕುಮಾರ್ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande