
ನವದೆಹಲಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಸ್ಮರಣೆ ಅಂಗವಾಗಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಶಿವಾಜಿ ಮಹಾರಾಜರು ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡಲು ಜನರನ್ನು ಒಗ್ಗೂಡಿಸಿ “ಹಿಂದವಿ ಸ್ವರಾಜ್ಯ”ವನ್ನು ಸ್ಥಾಪಿಸಿದ ಮಹಾನ್ ನಾಯಕರೆಂದು ತಿಳಿಸಿದ್ದಾರೆ. ಸಮುದ್ರಗಳ ಮಹತ್ವವನ್ನು ಬಹಳ ಹಿಂದೆಯೇ ಅರಿತು ಬಲಿಷ್ಠ ನೌಕಾಪಡೆಯನ್ನು ನಿರ್ಮಿಸಿದ ಅವರು, ತಮ್ಮ ಅಪ್ರತಿಮ ಕಾರ್ಯತಂತ್ರ ಮತ್ತು ದೂರದೃಷ್ಟಿಯ ನಾಯಕತ್ವದ ಮೂಲಕ ದೇಶದ ಭದ್ರತೆಗೆ ಹೊಸ ದಿಕ್ಕು ನೀಡಿದರು ಎಂದಿದ್ದಾರೆ.
ಶಿವಾಜಿ ಮಹಾರಾಜರ ಆಡಳಿತವು ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸುವುದರ ಜೊತೆಗೆ ಸಾರ್ವಜನಿಕ ಕಲ್ಯಾಣದ ಆದರ್ಶಗಳನ್ನು ಪ್ರತಿಷ್ಠಾಪಿಸಿದ ಮಾದರಿಯಾಗಿದೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ. ಅವರ ಜೀವನಗಾಥೆ ಮತ್ತು ಹೋರಾಟ ದೇಶದ ಜನತೆಗೆ ಶಾಶ್ವತವಾಗಿ ದೇಶಭಕ್ತಿ ಮತ್ತು ತ್ಯಾಗದ ಸ್ಪೂರ್ತಿಯನ್ನು ತುಂಬುತ್ತದೆ, ಶಿವಾಜಿ ಮಹಾರಾಜರ ತ್ಯಾಗ, ಧೈರ್ಯ ಮತ್ತು ದೇಶಪ್ರೇಮವು ಸದಾ ದೇಶವಾಸಿಗಳನ್ನು ಮಾತೃಭೂಮಿಗೆ ಸಮರ್ಪಿತ ಜೀವನ ನಡೆಸಲು ಪ್ರೇರೇಪಿಸುತ್ತಲೇ ಇರುತ್ತದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa