
ಗಂಗಾವತಿ, 03 ಏಪ್ರಿಲ್ (ಹಿ.ಸ.) ;
ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ವಿವಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಪ್ರವೇಶ ಪಡೆದು 2024-25ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ರ್ಯಾಂಕ್ ಪಡೆದವರಲ್ಲಿ ನಗರದ ಶ್ರೀ ಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಂಹಪಾಲು ಲಭಿಸಿದೆ.
ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಹಬೀಬಾ (82.25%) ಪ್ರಥಮ ರ್ಯಾಂಕ್, ಮಂಜಮ್ಮ (81%) ದ್ವೀತೀಯ ರ್ಯಾಂಕ್ ಗಳಿಸಿದ್ದಾರೆ.
ಎಂ.ಎ.ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಆನಂದಕುಮಾರ್ (84%) ಪ್ರಥಮ ರ್ಯಾಂಕ್, ಶರಣಮ್ಮ(82.54%) ದ್ವಿತೀಯ ರ್ಯಾಂಕ್, ರುವಾನಾ ಬೇಗಂ (82.21%) ತೃತೀಯ ರ್ಯಾಂಕ್, ಶೋಭಾ (80.88%) ನಾಲ್ಕನೇ ರ್ಯಾಂಕ್ ಹಾಗೂ ಶ್ರೀದೇವಿ (80.17%) ಐದನೇ ರ್ಯಾಂಕ್ ಗಳಿಸಿದ್ದಾರೆ.
ಎಂ.ಎ. ಕನ್ನಡದಲ್ಲಿ ಹೀನಾ (85.75%) ಪ್ರಥಮ ರ್ಯಾಂಕ್, ಸುಮಾ ಹೊರಪೇಟೆ (84.46%) ದ್ವಿತೀಯ ರ್ಯಾಂಕ್, ವಿನಾಯಕ (84.42%) ತೃತೀಯ ರ್ಯಾಂಕ್, ಅಮರಪ್ಪ (84%) ನಾಲ್ಕನೇ ರ್ಯಾಂಕ್ ಹಾಗೂ ಹೊನ್ನೂರಪ್ಪ (83.75%) ಐದನೇ ರ್ಯಾಂಕ್ ಪಡೆದಿದ್ದಾರೆ.
ಎಂ.ಎ.ಸಮಾಜಶಾಸ್ತ್ರ ವಿಭಾಗದಲ್ಲಿ ಜಯಮ್ಮ ಮತ್ತು ದುರ್ಗಮ್ಮ ನಾಯಕ್ (78.63%) ಇಬ್ಬರೂ ಪ್ರಥಮ ರ್ಯಾಂಕ್, ಕವಿತಾ ಹಾಗೂ ಜಿ.ಸುಮಲತಾ (78.33%) ಇಬ್ಬರೂ ದ್ವಿತೀಯ ರ್ಯಾಂಕ್, ಶ್ಯಾಮಲಾ (77.42%) ತೃತೀಯ ರ್ಯಾಂಕ್, ಕನಕಮ್ಮ (76.13%) ನಾಲ್ಕನೇ ರ್ಯಾಂಕ್ ಹಾಗೂ ಅಂಜುಮ್ ಬೇತಾಲಿ (75.63%) ಐದನೇ ರ್ಯಾಂಕ್ ಗಳಿಸಿದ್ದಾರೆ.
ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಪಂಪಾಪತಿ (77.13%) ಪ್ರಥಮ ರ್ಯಾಂಕ್, ಮಂಜುನಾಥ್ (74.42%) ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ಎಂ.ಎ. ರಾಜ್ಯಶಾಸ್ತ್ರ ವಿಭಾಗದಲ್ಲಿ ಸುಷ್ಮಾ ಸರೋಜಾ (78.08%) ದ್ವೀತೀಯ ರ್ಯಾಂಕ್ ಗಳಿಸಿದ್ದಾರೆ.
ಎಂ.ಎ. ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಬಿ.ಚೈತ್ರಾ (81.58%) ಪ್ರಥಮ ರ್ಯಾಂಕ್, ಶಕೀಲಾ (79.21%) ದ್ವಿತೀಯ ರ್ಯಾಂಕ್, ಎಂ.ದುರ್ಗಶ್ಯಾಮಪ್ರಸಾದ್ (78.71%) ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್