
ಗದಗ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಜಗದ್ಗುರು ತೋಂಟದಾರ್ಯ ಮಠದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಂಗಾಯತ ಪ್ರಗತಿಶೀಲ ಸಂಘಕ್ಕೆ 2026-27ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಶ್ರೀಮಠದಲ್ಲಿ ಜರುಗಿದ ಸಂಘದ ವಾರ್ಷಿಕ ಸಭೆಯಲ್ಲಿ ಮಹಾಪೋಷಕರಾದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.
ಸಂಘದ ನೂತನ ಅಧ್ಯಕ್ಷರಾಗಿ ಗದಗಿನ ಖ್ಯಾತ ಆಯುರ್ವೇದ ವೈದ್ಯರಾದ ಡಾ. ಉಮೇಶ ವಿ. ಪುರದ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಡಾ. ಪ್ರಭು ಗಂಜಿಹಾಳ ಹಾಗೂ ಶ್ರೀಮತಿ ಸುರೇಖಾ ಎಸ್. ಪಿಳ್ಳೆ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಎಸ್. ಐ. ಪಟ್ಟೇದ, ಸಹಕಾರ್ಯದರ್ಶಿಯಾಗಿ ಶ್ರೀಮತಿ ಪ್ರತಿಭಾ ಮು. ಬಡ್ನಿ ನೇಮಕಗೊಂಡಿದ್ದಾರೆ.
ಇದೇ ವೇಳೆ ಶಿವಾನುಭವ ಸಮಿತಿ ಚೇರ್ಮನ್ ಆಗಿ ಡಾ. ರಮೇಶ ಎಂ. ಕಲ್ಲನಗೌಡರ, ಸಹಚೇರ್ಮನ್ ಆಗಿ ಡಾ. ಆದೇಶ ಎಂ. ಅಂಗಡಿ ಆಯ್ಕೆಯಾಗಿದ್ದಾರೆ. ಕೋಶಾಧ್ಯಕ್ಷರಾಗಿ ವೀರಣ್ಣ ಗೋಟಡಕಿ ಹಾಗೂ ಸಹ ಕೋಶಾಧ್ಯಕ್ಷರಾಗಿ ಕೆ.ಎಸ್. ಕೋರಿಮಠ ಆಯ್ಕೆಯಾದರೆ, ಸಂಘಟನಾ ಕಾರ್ಯದರ್ಶಿಯಾಗಿ ಸೋಮನಾಥ ಪುರಾಣಿಕ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಇದಲ್ಲದೆ, ಇದೇ ತಿಂಗಳ 6ರಂದು (ಸೋಮವಾರ) 2792ನೇ ಶಿವಾನುಭವ ಕಾರ್ಯಕ್ರಮದ ಅಂಗವಾಗಿ ನೂತನ ಪದಾಧಿಕಾರಿಗಳ ಸೇವಾಹಸ್ತಾಂತರ ಸಮಾರಂಭ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ಸದಸ್ಯರು ಸಂತೋಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸಂಘದ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಲಿವೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP