
ಬಳ್ಳಾರಿ, 03 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ಮಹಾನಗರ ಪಾಲಿಕೆಯ ಜೆಇ ವೀರೇಶ್ ಜಿ.ಎಂ. ಅವರ ಮೇಲೆ ಕಾಂಗ್ರೆಸ್ ಕಾರ್ಪೊರೇಟರ್ ವಿ. ಕುಬಾರ ಅವರು ಹಲ್ಲೆ ಮಾಡಿಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಮತ್ತು ಕಾರ್ಪೊರೇಟರುಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು - ಸಿಬ್ಬಂದಿಯು ಪಾಲಿಕೆಯ ಮುಂದೆ ಶುಕ್ರವಾರ ಸಂಜೆಯಿಂದ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಅಷ್ಟೆ ಅಲ್ಲ, ಪ್ರಕರಣ ದಾಖಲಾಗದಂತೆ ಕಾಂಗ್ರೆಸ್ಸಿಗರು ಪಾಲಿಕೆಯ ಆಯುಕ್ತರ ಮೇಲೆ ಒತ್ತಡ ಹೇರುತ್ತಿರುವುದನ್ನು ಖಂಡಿಸಿ, ಪೊಲೀಸರು ಸಂತ್ರಸ್ತ ಅಧಿಕಾರಿಗಳು - ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಲ್ಲದೇ, ಕಾಂಗ್ರೆಸ್ಸಿಗರು ಶಾಸಕರ ನೇತೃತ್ವದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ವಿ. ಕುಬೇರ ಅಧಿಕಾರಿ ಜಿ.ಎಂ. ವೀರೇಶ್ ಅವರಲ್ಲಿ ಕ್ಷಮೆ ಕೇಳುವುದಾಗಿ ಪಾಲಿಕೆಯ ಆಯುಕ್ತರಲ್ಲಿ ರಾಜೀಸೂತ್ರವನ್ನು ತಿಳಿಸಿದ್ದಾರೆ. ಆದರೆ, ಪರಿಸ್ಥಿತಿಯು ಕ್ಷಣ ಕ್ಷಣಕ್ಕೂ ವಿಭಿನ್ನ ಸ್ವರೂಪಗಳನ್ನು ಪಡೆಯುತ್ತಿದ್ದು, ವಿವಾದ ರಾಜ್ಯ ಮಟ್ಟಕ್ಕೆ ವಿಸ್ತಾರಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್