ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ 32 ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆ
ನವದೆಹಲಿ, 03 ಏಪ್ರಿಲ್ (ಹಿ.ಸ.) : ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸಪ್ರೆಸ್ ಸಂಸ್ಥೆಗಳು ಇಂದು ಒಟ್ಟು 32 ನಿಗದಿತ ಮತ್ತು ನಿಗದಿತವಲ್ಲದ ವಿಮಾನಗಳನ್ನು ಕಾರ್ಯಾಚರಣೆಗೊಳಿಸಿವೆ. ವಿಮಾನಯಾನ ಸಂಸ್ಥೆಯ ಪ್ರಕಟಣೆಯ ಪ್ರಕಾರ, ಪ್ರಯಾಣಿಕರಿ
Air India


ನವದೆಹಲಿ, 03 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸಪ್ರೆಸ್ ಸಂಸ್ಥೆಗಳು ಇಂದು ಒಟ್ಟು 32 ನಿಗದಿತ ಮತ್ತು ನಿಗದಿತವಲ್ಲದ ವಿಮಾನಗಳನ್ನು ಕಾರ್ಯಾಚರಣೆಗೊಳಿಸಿವೆ.

ವಿಮಾನಯಾನ ಸಂಸ್ಥೆಯ ಪ್ರಕಟಣೆಯ ಪ್ರಕಾರ, ಪ್ರಯಾಣಿಕರಿಗೆ ನೆರವಾಗುವ ಉದ್ದೇಶದಿಂದ ವಿಶೇಷವಾಗಿ 18 ನಿಗದಿತವಲ್ಲದ (ಚಾರ್ಟರ್/ರಿಲೀಫ್) ವಿಮಾನಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಕಡೆಗೆ ಹಾಗೂ ಅಲ್ಲಿಂದ ನಿರ್ವಹಿಸಲಾಗುತ್ತಿದೆ. ಇವುಗಳಿಗೆ ಸಂಬಂಧಿತ ಭಾರತೀಯ ಹಾಗೂ ಸ್ಥಳೀಯ ನಿಯಂತ್ರಕ ಸಂಸ್ಥೆಗಳ ಅಗತ್ಯ ಅನುಮೋದನೆಗಳನ್ನು ಪಡೆಯಲಾಗಿದೆ.

ಈ ವಿಶೇಷ ವಿಮಾನ ಸೇವೆಗಳು ಪಶ್ಚಿಮ ಏಷ್ಯಾದ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಶಾರ್ಜಾ, ಮಸ್ಕತ್ ಮತ್ತು ಜೆಡ್ಡಾಗಳನ್ನು ಸಂಪರ್ಕಿಸುತ್ತಿವೆ.

ಸ್ಲಾಟ್ ಲಭ್ಯತೆ, ಭದ್ರತಾ ಪರಿಸ್ಥಿತಿ ಮತ್ತು ಸ್ಥಳೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿಮಾನಗಳ ನಿರ್ವಹಣೆ ನಡೆಯುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮತ್ತು ಪ್ರಯಾಣ ಸುಗಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ವಿಮಾನಯಾನ ಸಂಸ್ಥೆಗಳು ಮುಂದಿನ ದಿನಗಳಲ್ಲಿಯೂ ಪರಿಸ್ಥಿತಿಯನ್ನು ಸಮೀಕ್ಷಿಸಿ ಅಗತ್ಯವಿದ್ದರೆ ಹೆಚ್ಚುವರಿ ಸೇವೆಗಳನ್ನು ಪ್ರಾರಂಭಿಸುವ ಸಾಧ್ಯತೆ ಇದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande