



ಸಂಡೂರು, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಎಂ. ಬಸಾಪುರ ಗ್ರಾಮದ ಶ್ರೀಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಗ್ರಾಮದ ರಂಗನೇಸರ ಸಾಂಸ್ಕøತಿಕ ಕಲಾ ಸಂಘ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ `ನಮ್ಮ ಸಂಸ್ಕøತಿ, ನಮ್ಮ ಹಬ್ಬ - 2026’ ತುಂತುರು ಮಳೆ ಇದ್ದರೂ ಕಲಾತಂಡಗಳ ಪ್ರದರ್ಶನವು ಪ್ರೇಕ್ಷಕರಿಗೆ ಬೆಚ್ಚನೆಯ ಅನುಭವ ನೀಡಿತು.
ಸುಮಾರು ಐದು ಕಲಾ ತಂಡಗಳು ಒಂದೇ ವೇದಿಕೆಯಲ್ಲಿ ನೀಡಿದ ಕಲಾಪ್ರದರ್ಶನವು ಪ್ರೇಕ್ಷಕರನ್ನು ರಂಜಿಸಿತು. ಕಲಾವಿದರ ಕಲೆಯ ಪ್ರದರ್ಶನಕ್ಕೆ ಪ್ರೇಕ್ಷಕರು ಚಪ್ಪಾಳೆ, ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದು ಅದ್ಭುತವಾಗಿತ್ತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಅವರು ಮಾತನಾಡಿ, ಇಲಾಖೆಯು ಗ್ರಾಮೀಣ ಭಾಗದಲ್ಲಿ ವಿವಿಧ ಕಲಾ ಪ್ರಕಾರಗಳನ್ನು ಪೋಷಿಸಲು ವಿವಿಧ ಯೋಜನೆಗಳನ್ನು ರೂಪಿಸಿದ್ದು, ಈ ನಿಟ್ಟಿನಲ್ಲಿ `ನಮ್ಮ ಸಂಸ್ಕøತಿ-ನಮ್ಮ ಹಬ್ಬ 2026’ ಒಂದು ಗ್ರಾಮೀಣ ಜನರನ್ನು ತಲುಪುತ್ತಿದ್ದು, ಹಾಗಾಗಿ ಈ ಕಾರ್ಯಕ್ರಮವನ್ನು ರಂಗನೇಸ ಸಾಂಸ್ಕøತಿಕ ಕಲಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಪ್ರೇಕ್ಷಕರು ನಮ್ಮ ಕಲೆ ಮತ್ತು ಸಂಸ್ಕøತಿ ಉಳಿಸಲು ಇಲಾಖೆಯೊಂದಿಗೆ ಕೈಜೋಡಿಸಬೇಕೆಂದರು.
ರಂಗನೇಸರ ಸಾಂಸ್ಕøತಿಕ ಕಲಾ ತಂಡದ ಅಧ್ಯಕ್ಷರಾದ ಡಾ.ಕೆ.ಬಸಪ್ಪ ಅವರು ಮಾತನಾಡಿ, ನಮ್ಮ ಕಲಾ ಸಂಘವು ಬಳ್ಳಾರಿ ಜಿಲ್ಲೆಯಲ್ಲಿ ಡೊಳ್ಳು ಕುಣಿತ ಪ್ರದರ್ಶನದಲ್ಲಿ ಹೆಸರು ಮಾಡಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಕಲೆಯನ್ನು ಕಲಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಯದರ್ಶಿಯವರಾದ ಚಂದ್ರಶೇಖರ್ ಅವರು ನಿರಂತರ ಶ್ರಮಿಸುತ್ತಿದ್ದಾರೆ ಅಲ್ಲದೆ ಪ್ರದರ್ಶನ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಗ್ರಾಮೀಣ ಕಲೆಗಳ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.
ತಾ.ಪಂ. ಮಾಜಿ ಸದಸ್ಯ ಕೆ.ಬಿ.ಹೊಸಗೇರಪ್ಪ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಗ್ರಾಮೀಣ ಭಾಗದಲ್ಲಿ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದೆ. ಪ್ರೇಕ್ಷಕರು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ತಿಳಿಸಿದರು.
ಎಂ. ಬಸಾಪುರದ ವೀರೇಶ್ ಮತ್ತು ತಂಡ ತತ್ವ ಪದಗಳು ಮತ್ತು ಭಜನೆಗೀತೆಗಳನ್ನು, ಸೋಮಸಮುದ್ರದ ದೊಡ್ಡಬಸಪ್ಪ ಮತ್ತು ತಂಡದವರು ಸುಗಮ ಸಂಗೀತವನ್ನು, ಬಳ್ಳಾರಿಯ ಪಿ. ಭವ್ಯ ಮತ್ತು ತಂಡದವರಿಂದ ಸಮೂಹ ನೃತ್ಯ ಪ್ರಸ್ತುತಪಡಿಸಲಾಯಿತು, ಹಾಗೂ ಮೆಟ್ರಿಯ ರಂಗ ಕಲಾವಿದೆ ಶಂಕರ್ ಮೆಟ್ರಿ ಅವರು ಉತ್ತಮವಾಗಿ ಗಾಯನ ಮಾಡಿದರು.
ಬಳ್ಳಾರಿಯ ಸೂರ್ಯ ಕಲಾ ಟ್ರಸ್ಟ್ನ ನೃತ್ಯಗುರುವಾದ ಕೆ. ಸಿ ಸುಂಕಣ್ಣ ನೇತೃತ್ವದಲ್ಲಿ ನೃತ್ಯ ಗಾಯನಗಳು ನಡೆದವು. ಕೊನೆಯಲ್ಲಿ ಅನಂತ ಕುಮಾರ್ ಮತ್ತು ತಂಡದವರಿಂದ ಕುಂಟ ಕುಂಟ ಕುರುವತ್ತಿ ನಾಟಕವನ್ನು ಪ್ರದರ್ಶಿಸಲಾಯಿತು.
ಜಡೇಶ ಎಮ್ಮಿಗನೂರು ಅವರಿಂದ ಅದ್ಭುತ ಗಾಯನವನ್ನ ನಡೆಸಿಕೊಟ್ಟರು.
ಊರಿನ ಮುಖಂಡರು ಹಾಗೂ ಮೆಟ್ರಿಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಬಿ.ಆರ್, ಕೆಂಚಪ್ಪ ಕೆ. ಎಸ್., ರಾಮಣ್ಣ ಎರಿಸ್ವಾಮಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಕೆ.ಶಿವಲಿಂಗಪ್ಪ, ಗಾಂಧಿಬಸಣ್ಣ ಹುಚ್ಚಪ್ಪ(ಹೋಸಿಗೇರಪ್ಪ) ಯಲ್ಲಪ್ಪ ಸಂಸ್ಥೆಯ ಉಪಾಧ್ಯಕ್ಷರಾದ ಶೀಲಪ್ಪ, ಕಾರ್ಯದರ್ಶಿಗಳಾದ ಚಂದ್ರಶೇಖರ್, ಖಜಾಂಚಿ ಬಿ. ಆರ್. ಸಿದ್ದಪ್ಪ ಇದ್ದರು. ಕಾರ್ಯಕ್ರಮವನ್ನು ಕಂದರ್ ತಿಪ್ಪೇಸ್ವಾಮಿ ನಿರೂಪಿಸಿದರು. ಆರಂಭದಲ್ಲಿ ಜಡೇಶ್ ಎಮ್ಮಿಗನೂರು ಸ್ವಾಗತಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್