ಬೆಳೆ ವಿಮೆ ಪ್ರಸ್ತಾವನೆಗಳಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಗದಗ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : 2024-25 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಅಡಿ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ಇರುವ ಕಾರಣಕ್ಕೆ ಗದಗ ತಾಲೂಕಿನ ಮುಂಗಾರು ಹಂಗಾಮಿನ 1255 ಹಾಗೂ ಹಿಂಗಾರು ಹಂಗಾಮಿನ
ಫೋಟೋ


ಗದಗ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2024-25 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಅಡಿ ಬೆಳೆ ಸಮೀಕ್ಷೆಯೊಂದಿಗೆ ಹೊಂದಾಣಿಕೆಯಾಗದೆ ಇರುವ ಕಾರಣಕ್ಕೆ ಗದಗ ತಾಲೂಕಿನ ಮುಂಗಾರು ಹಂಗಾಮಿನ 1255 ಹಾಗೂ ಹಿಂಗಾರು ಹಂಗಾಮಿನ 46 ಒಟ್ಟು 1301 ಬೆಳೆ ವಿಮೆ ಪ್ರಸ್ತಾವನೆಗಳು ವಿಮಾ ಸಂಸ್ಥೆಯವರಿಂದ ತಿರಸ್ಕೃತಗೊಂಡಿರುತ್ತವೆ.

ಇಂತಹ ಪ್ರಸ್ತಾವನೆಗಳ ಗ್ರಾಮವಾರು ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರಗಳು ಹುಲಕೋಟಿ/ ಬೆಟಗೇರಿ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಗದಗ ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಗದಗ ಇವರುಗಳ ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದ್ದು, ರೈತರು ತಮ್ಮ ಆಕ್ಷೇಪಣೆಗಳೆನಾದರೂ ಇದ್ದಲ್ಲಿ ಈ ಕೆಳಕಂಡ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

2024-25 ರ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ನೋಂದಾಯಿತ ಬೆಳೆ ನಮೂದಾದ ಉತಾರ ಅಥವಾ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಮಾರಾಟ ಮಾಡಿದ್ದರೆ ಅದರ ರಸೀದಿ ಅಥವಾ ಎ.ಪಿ.ಎಮ್.ಸಿ ಯಲ್ಲಿ ಸದರಿ ಬೆಳೆ ಮಾರಾಟ ಮಾಡಿದ್ದರ ರಸೀದಿ

ಆಕ್ಷೇಪಣೆ ಸಲ್ಲಿಕೆಗೆ ಮೇ 12 ಕೊನೆಯ ದಿನವಾಗಿದೆ. ಕೃಷಿ ಬೆಳೆಯಾಗಿದ್ದರೆ (ಶೇಂಗಾ, ಗೋದಿ, ಕಡಲೆ ಇತ್ಯಾದಿ) ರೈತ ಸಂಪರ್ಕ ಕೇಂದ್ರ, ಹುಲಕೋಟಿ/ ಬೆಟಗೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಗದಗ ಹಾಗೂ ತೋಟಗಾರಿಕಾ ಬೆಳೆಯಾಗಿದ್ದಲ್ಲಿ (ಕೆಂಪು ಮೆನಸಿನಕಾಯಿಗೆ) ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಗದಗ ಇಲ್ಲಿ ಮೇಲ್ಕಂಡ ದಾSಲಾತಿಯೊಂದಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರ, ಹುಲಕೋಟಿ/ಬೆಟಗೇರಿ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ, ಗದಗ ಇವರನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕರಾದ ಮಲ್ಲಯ್ಯ ಕೊರವನವರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande