ನೀತಿ ಆಯೋಗ ಪುನಾರಚನೆಗೆ ಸ್ವಾಗತ – ಹೊಸ ನೇಮಕಾತಿಗಳಿಗೆ ಅಭಿನಂದನೆ
ವಿಜಯಪುರ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ನೀತಿ ಆಯೋಗ ಭಾರತದ ನೀತಿ ನಿರ್ಮಾಣ ವ್ಯವಸ್ಥೆಯಲ್ಲಿ ಪ್ರಮುಖ ಸ್ತಂಭವಾಗಿ ಹೊರಹೊಮ್ಮಿದ್ದು, ಸಹಕಾರಾತ್ಮಕ ಫೆಡರಲಿಸಂ ಬಲಪಡಿಸುವುದು, ಸುಧಾರಣೆಗಳನ್ನು ಮುಂದುವರಿಸುವುದು ಹಾಗೂ ‘Ease of Living’ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಂಸದ
ನೀತಿ ಆಯೋಗ ಪುನಾರಚನೆಗೆ ಸ್ವಾಗತ – ಹೊಸ ನೇಮಕಾತಿಗಳಿಗೆ ಅಭಿನಂದನೆ


ವಿಜಯಪುರ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನೀತಿ ಆಯೋಗ ಭಾರತದ ನೀತಿ ನಿರ್ಮಾಣ ವ್ಯವಸ್ಥೆಯಲ್ಲಿ ಪ್ರಮುಖ ಸ್ತಂಭವಾಗಿ ಹೊರಹೊಮ್ಮಿದ್ದು, ಸಹಕಾರಾತ್ಮಕ ಫೆಡರಲಿಸಂ ಬಲಪಡಿಸುವುದು, ಸುಧಾರಣೆಗಳನ್ನು ಮುಂದುವರಿಸುವುದು ಹಾಗೂ ‘Ease of Living’ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಂಸದ ಗೋವಿಂದ ಕಾರಜೋಳ ಪ್ರಕಟಣೆ ಮೂಲಕ ತಿಳಿಸಿದರು.

ದೇಶದ ಸಮಗ್ರ ಅಭಿವೃದ್ಧಿಗೆ ದೀರ್ಘಕಾಲಿಕ ತಂತ್ರಚಿಂತನೆ ಮತ್ತು ನವೀನತೆಗೆ ವೇದಿಕೆಯಾಗಿರುವ ಈ ಸಂಸ್ಥೆ, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಗೆ ದಿಕ್ಕು, ನಿರ್ದೇಶನ ನೀಡುತ್ತಿದೆ. ಇತ್ತೀಚೆಗೆ ನೀತಿ ಆಯೋಗವನ್ನು ಪುನಾರಚಿಸಿರುವ ಹಿನ್ನೆಲೆಯಲ್ಲಿ, ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಅಶೋಕ್ ಕುಮಾರ್ ಲಾಹಿರಿ ಅವರಿಗೆ ಹಾರ್ದಿಕ ಶುಭಾಶಯಗಳು ಸಲ್ಲಿಸಿದರು. ಜೊತೆಗೆ, ಪೂರ್ಣಕಾಲಿಕ ಸದಸ್ಯರಾಗಿ ನೇಮಕಗೊಂಡಿರುವ ರಾಜೀವ್ ಗೌಬಾ, ಕೆ. ವಿ. ರಾಜು, ಗೋಬರ್ಧನ್ ದಾಸ್, ಅಭಯ ಕರಂದೀಕರ ಹಾಗೂ ಎಂ. ಶ್ರೀನಿವಾಸ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಹೊಸ ನೇಮಕಾತಿಗಳು ಸಂಸ್ಥೆಗೆ ಹೊಸ ಚೈತನ್ಯ ನೀಡಲಿದ್ದು, ದೇಶದ ಆರ್ಥಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಮತ್ತಷ್ಟು ವೇಗ ನೀಡುವ ನಿರೀಕ್ಷೆ ವ್ಯಕ್ತವಾಗಿದೆ. ನವೀನ ಆಲೋಚನೆಗಳು, ಸಮಾವೇಶಿ ವಿಕಾಸ ಹಾಗೂ ದೀರ್ಘಕಾಲಿಕ ಯೋಜನೆಗಳ ಮೂಲಕ ‘ವಿಕಸಿತ ಭಾರತ’ ಕನಸನ್ನು ಸಾಕಾರಗೊಳಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಇವರು ತಮ್ಮ ಅವಧಿಯಲ್ಲಿ ಫಲಪ್ರದ ಹಾಗೂ ಪರಿಣಾಮಕಾರಿ ಸೇವೆ ಸಲ್ಲಿಸಿ, ಭಾರತದ ಅಭಿವೃದ್ಧಿ ಪಥವನ್ನು ಇನ್ನಷ್ಟು ಬಲಪಡಿಸುವಂತೆ ಹಾರಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande