
ಕುಡತಿನಿ, 28 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೆಐಡಿಬಿಯು ಅರ್ಸೆಲರ್ ಮಿತ್ತೆಲ್ ಕಂಪನಿಗಾಗಿ 2012 ರಲ್ಲಿ ಸ್ವಾಧೀನ ಮಾಡಿಕೊಂಡಿದ್ದ ರೈತರ ಜಮೀನುಗಳನ್ನು ಕಾನೂನುಬಾಹಿರವಾಗಿ ಜಿಂದಾಲ್ ಕಂಪನಿಗೆ ಮಾರಾಟ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರ ಬಂಧನ ವಿರೋಧಿಸಿ, ಕುಡತಿನಿಯಿಂದ ಸಂಡೂರುವರೆಗೆ ಬುಧವಾರ ಬೆಳಗ್ಗೆಯಿಂದ ಭೂ ಸಂತ್ರಸ್ತರು ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.
ಭೂ ಸಂತ್ರಸ್ತರ ಪ್ರತಿಭಟನಾ ವೇದಿಕೆಯ ಸ್ಥಳದಲ್ಲಿ ಬುಧವಾರ ಬೆಳಗ್ಗೆ 7 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ. ತಾಳೂರು ಗ್ರಾಮದಲ್ಲಿ ವಸತಿ. ಗುರುವಾರ ಪುನಃ ಪಾದಯಾತ್ರೆ ಪ್ರಾರಂಭವಾಗಿ, ಸಂಡೂರು ಪಟ್ಟಣದಲ್ಲಿ ಸಮಾರೋಪಗೊಳ್ಳಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್