ಬಿಸಿಲ ತಾಪ ; ಕೂಲಿ ಕಾರ್ಮಿಕ ಸಾವು
ಖಾತರಿ
ಬಿಸಿಲ ತಾಪ ; ಕೂಲಿ ಕಾರ್ಮಿಕ ಸಾವು


ರಾಯಚೂರು, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನರೇಗಾ ಕಾಮಗಾರಿ ಮಾಡುತ್ತಿದ್ದಾಗ ತೀವ್ರ ಬಿಸಿಲಿನ ತಾಪದ ಕಾರಣ ಕಾರ್ಮಿಕನೊಬ್ಬ ಕುಸಿದು ಬಿದ್ದು ಸಾವನ್ನಪ್ಪಿದ ದುರ್ಘಟನೆ ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಗ್ರಾಮದ ಹೊರವಲಯದಲ್ಲಿ ವರದಿಯಾಗಿದೆ.

ಮೃತನು ಹುಸೇನಪ್ಪ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಪಲದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಳ್ಳಕುಂಟಾ ಕೆರೆ ಅಭಿವೃದ್ಧಿ ಕಾಮಗಾರಿ ನಾಲ್ಕು ದಿನಗಳಿಂದ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ನಡೆಯುತ್ತಿತು.

ಹುಸೇನಪ್ಪನು ಕೆಲಸದಲ್ಲಿ ಕೂಲಿ ಕಾರ್ಮಿಕನಾಗಿ ಪಾಲ್ಗೊಂಡಿದ್ದನು ಎಂದು ಹೇಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande