180ನೇ ದಿನ ಪೂರ್ಣಗೊಳಿಸಿದ ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ
ಕೊಪ್ಪಳ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ನಗರಸಭೆ ಮುಂದಿನ ಬಲ್ಬೋಟ ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ 180ನೇ ದಿನದಲ್ಲಿ ಯಶಸ್ವಿಯಾಯಿತು. ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ನೇತೃತ್ವದಲ್ಲಿ ನಡೆದ ಧರಣಿ ವೇದಿಕೆಯಲ್ಲಿ ಮಹಿಳಾ ಮುಖಂಡರಾದ ಸಾವಿತ್ರಿ ಮುಜುಮದಾರ ಮ
180ನೇ ದಿನ ಪೂರ್ಣಗೊಳಿಸಿದ ಬಲ್ಡೋಟ ಕಾರ್ಖಾನೆ ತೊಲಗಿಸಿ ಧರಣಿ


ಕೊಪ್ಪಳ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ನಗರಸಭೆ ಮುಂದಿನ ಬಲ್ಬೋಟ ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಧರಣಿ 180ನೇ ದಿನದಲ್ಲಿ ಯಶಸ್ವಿಯಾಯಿತು. ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ನೇತೃತ್ವದಲ್ಲಿ ನಡೆದ ಧರಣಿ ವೇದಿಕೆಯಲ್ಲಿ ಮಹಿಳಾ ಮುಖಂಡರಾದ ಸಾವಿತ್ರಿ ಮುಜುಮದಾರ ಮಾತನಾಡಿ, ಈ ಧಗಧಗ ಉರಿಯುತ್ತಿರುವ ಬಿರುಬಿಸಿಲಿಗೆ ಜನ, ಜಾನುವಾರು ಬಸವಳಿದು ಹೋಗಿವೆ. ನದಿ, ಹಳ್ಳ, ಕೆರೆ, ಕಟ್ಟೆ ಇವೆಲ್ಲವುಗಳು ನಾಡಿನ ಸಂಪತ್ತು. ಸಾರ್ವಜನಿಕ, ಸಮುದಾಯದ ಆಸ್ತಿ. ಇವುಗಳ ಮೇಲೆ ಗ್ರಾಮೀಣ ಜನರ ಸಂಪೂರ್ಣವಾದ ಹಕ್ಕು ಇದೆ. ಬಸಾಪುರ ಕೆರೆ ಸಮುದಾಯದ ಆಸ್ತಿ. ಸಾವಿರಾರು ಜಾನುವಾರು, ಕುರಿ, ಮೇಕೆ ಬೇಸಿಗೆಯ ನೀರಿನ ದಾಹಕ್ಕೆ ಬಾಯಿತೆರೆದಾಗಲೂ ಕಾರ್ಖಾನೆಯವರು ಕಾಂಪೌಂಡ್ ಕಟ್ಟಿ ಕೆರೆಯನ್ನು ಕಬ್ಜಾದಲ್ಲಿ ಇಟ್ಟುಕೊಂಡು ಮಾನವೀಯತೆ ಮರೆತಿರುವುದನ್ನು ಖಂಡಿಸೋಣ. ಬಸಾಪುರ ಕೆರೆ ಜಾನುವಾರು ನೀರು ಕುಡಿಯಲು ಮುಕ್ತವಾಗಿಡಲು ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಪನಿಗೆ ಬುದ್ದಿ ಹೇಳಬೇಕು. ಹೈಕೋರ್ಟ್ ಆದೇಶವಿದ್ದರೂ ಯಾಕೆ ಹಿಂಜರಿಕೆ ಎಂದು ಪ್ರಶ್ನಿಸಿದರು.

ಇನ್ನೊಬ್ಬ ಸಾಮಾಜಿಕ ಹೋರಾಟಗಾರ್ತಿ ಸರೋಜಾ ಬಾಕಳೆ ಮಾತನಾಡಿ, ಜೀವ, ಆರೋಗ್ಯ ಉಳಿಸಿಕೊಳ್ಳುವ ಈ ಹೋರಾಟಕ್ಕೆ ಸರ್ವ ಜನರು ಬೆಂಬಲಕ್ಕೆ ಬರಬೇಕು ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಮಹಿಳಾ ನಾಯಕಿ ಕಾವ್ಯಾ ಗಡಾದ, ರಾಜ್ಯ ರೈತ ಸಂಘದ ಮುಖಂಡ ಭೀಮಸೇನ ಕಲಕೇರಿ, ಶಿವಪ್ಪ ದೇವರಮನಿ ಬಗನಾಳ, ಮಹೇಶ ವದ್ನಾಳ ಬಗನಾಳ, ಗವಿಸಿದ್ದಪ್ಪ ಪುಟಗಿ ಬಗನಾಳ, ಜಗದೀಶ ಕುಂಬಾರ ಬಗನಾಳ, ಗಣೇಶ ವಿಶ್ವಕರ್ಮ, ಕೊಟ್ರಪ್ಪ ಪಲ್ಲೇದ ಬಗನಾಳ, ದೇವಪ್ಪ ಬಗನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ಶರಣು ಶೆಟ್ಟರ್, ನಾಗರಾಜ ಕುಷ್ಟಗಿ, ಬಿ.ಜಿ.ಕರಿಗಾರ, ವಿಜಯಮಹಾಂತೇಶ ಹಟ್ಟಿ, ರತ್ನಮ್ಮ, ಭೀಮಪ್ಪ ಯಲಬುರ್ಗಾ ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande