ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗದಗ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : 2026-27ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್, ನಾಗಸಮುದ್ರ ರಸ್ತೆ, ನರಸಾಪೂರ, ಗದಗ ಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಇ&ಸಿ ಹಾಗೂ ಕಂಪ್ಯೂರ್ಸ್ ಸೈನ್ಸ್ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾಂಶುಪಾಲರ ಹ
ಫೋಟೋ


ಗದಗ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : 2026-27ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಪಾಲಿಟೆಕ್ನಿಕ್, ನಾಗಸಮುದ್ರ ರಸ್ತೆ, ನರಸಾಪೂರ, ಗದಗ ಸಂಸ್ಥೆಯಲ್ಲಿ ಸಿವಿಲ್, ಮೆಕ್ಯಾನಿಕಲ್, ಇ&ಸಿ ಹಾಗೂ ಕಂಪ್ಯೂರ್ಸ್ ಸೈನ್ಸ್ ಪ್ರಥಮ ವರ್ಷದ ಡಿಪ್ಲೋಮಾ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಪ್ರಾಂಶುಪಾಲರ ಹಂತದಲ್ಲಿ ಆಫ್-ಲೈನ್ ಮೂಲಕ ಮೆರಿಟ್ ಹಾಗೂ ರೋಷ್ಠರ್ ಆಧಾರದ ಮೇರೆಗೆ ಎಸ್.ಎಸ್.ಎಲ್.ಸಿ. ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಸರ್ಕಾರಿ ಪಾಲಿಟೆಕ್ನಿಕ್ ಗದಗ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್ಸೈಟ್ ಗಳಲ್ಲಿ ಅರ್ಜಿ ನಮೂನೆ ಮತ್ತು ಇ-ಮಾಹಿತಿ ಪುಸ್ತಕವನ್ನು ಡೌನಲೋಡ್ ಮಾಡಿಕೊಂಡು, (ಅರ್ಜಿಯನ್ನು ಕಾಲೇಜಿನಲ್ಲಿಯೂ ಸಹ ನೀಡಲಾಗುವುದು) ಅರ್ಜಿಯನ್ನು ಇ-ಮಾಹಿತಿ ಪುಸ್ತಕದಲ್ಲಿರುವ ಸೂಚನೆಗಳನ್ವಯ ಸಂಪೂರ್ಣ ಭರ್ತಿ ಮಾಡಿಕೊಂಡು ಅವಶ್ಯವಿರುವ ಎಲ್ಲ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಸಂಸ್ಥೆಗೆೆ ಬಂದು ಅರ್ಜಿಯನ್ನು ಸಲ್ಲಿಸಿ ಆಫ್-ಲೈನ್ ಮೂಲಕ ಮೆರಿಟ್ ಹಾಗೂ ರೋಷ್ಠರ್ ಆಧಾರದ ಮೇರೆಗೆ ಪ್ರವೇಶ ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಯನ್ನು ಕಾಲೇಜಿನ ಕಛೇರಿ ಅವಧಿಯಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande