ಬಸವಣ್ಣನವರು ಸಾಂಸ್ಕೃತಿಕ ನಾಯಕ : ಶಾಸಕರಾದ ಹೇಮಲತಾ ನಾಯಕ
ಕೊಪ್ಪಳ, 21 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನ ಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಗರಸಭೆ, ಬಸವ ಜಯಂತ್ಯುತ್ಸವ ಸಮಿತಿ ಕೊಪ್ಪಳ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯ
Basavanna is a cultural leader


Basavanna is a cultural leader


Basavanna is a cultural leader


Basavanna is a cultural leader


ಕೊಪ್ಪಳ, 21 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನ ಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಗರಸಭೆ, ಬಸವ ಜಯಂತ್ಯುತ್ಸವ ಸಮಿತಿ ಕೊಪ್ಪಳ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ

ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಶ್ರೀ ಗವಿಸಿದ್ದೇಶ್ವರ ಮಠದ ಬಯಲ ಆವರಣದಲ್ಲಿ ಇಳಿಹೊತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಅವರು ಬಸವ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಹೇಮಲತಾ ನಾಯಕ, ಬಸವಣ್ಣನವರು ತೆರೆದ ಪುಸ್ತಕ ಇದ್ದಂತೆ. ಬಸವ ಹೇಳಿದ ಹಾದಿಯಲ್ಲಿ ನಾವು ನಡೆಯೋಣ. ಬಸವಣ್ಣನೆಂಬ ಬೆಳಕು ಉದಯಿಸಿದ್ದರಿಂದಲೇ ಈ ಜಗದ ಬದುಕು ಪಾವನವಾಯಿತು ಎಂದು ನಾವೆಲ್ಲರೂ ತಿಳಿಯಬೇಕು. ಅಂತಹ ಮಾನವತವಾದಿ ಬಸವಣ್ಣನವರು ಅಕ್ಷರಶಃ ಸಾಂಸ್ಕ್ರತಿಕ ನಾಯಕ ಎಂದು ತಿಳಿಸಿದರು.

ವೈಚಾರಿಕ ವಿಚಾರಧಾರೆಯ ವಚನಗಳ ಓದುವ ಮೂಲಕ

ಯುವಕರು ಧನಾತ್ಮಕ ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ನಾವು ಮುಂದಿನ ಪೀಳಿಗೆಗೆ ಬಸವ ವಿಚಾರಗಳನ್ನು ತಿಳಿಸಬೇಕು. ಶರಣರ ಉತ್ತಮ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಪ್ರತಿಜ್ಞೆಗೈಯೋಣ ಎಂದರು.

ಶರಣ ಚಿಂತಕ, ವಿದ್ವಾಂಸ ವಿ.ಎಸ್. ಮಾಳಿ ಹಾಗೂ ಚಿಂತಕಿ ಡಾ.ದಾನಮ್ಮ ಝಳಕಿ ಅವರು ಬಸವಗೋಷ್ಠಿ ನಡೆಸಿದರು.

ಬಿಸರಳ್ಳಿ ಶಾಖಾಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಮಾರಂಭದಲ್ಲಿ ಬಸವರಾಜ ಬಳ್ಳೊಳ್ಳಿ ಅವರು ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕರ್ಣಕುಮಾರ ಮತ್ತು ಬಸವ ಅನುಯಾಯಿಗಳು ಇದ್ದರು.

ಬಸವ ಕಾರುಣ್ಯ ಪುರಸ್ಕಾರ ಪ್ರದಾನ : ಉತ್ತಮ ಸಾಧಕರಾದ, ದಿವ್ಯಾಂಗ ಮಕ್ಕಳೊಂದಿಗೆ ಬದುಕುತ್ತ, ಮಕ್ಕಳ ಪಾಲನೆ ಪೋಷಣೆ ಮಾಡಿ ಸುಸ್ಥಿರ ಬದುಕು ಕಟ್ಟಿಕೊಂಡ ಶ್ರೀ ಯಲ್ಲಮ್ಮ ಬೆಳ್ಳಟ್ಟಿ ಅವರಿಗೆ, ಕೊಪ್ಪಳ ಇತಿಹಾಸದಲ್ಲಿ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿ ತಂದುಕೊಟ್ಟ ಕೊಟ್ಟೂರ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ, 600ಕ್ಕೆ 598 ಅಂಕ ಗಳಿಸಿ ಸಾಧನೆ ತೋರಿದ ಸಂಗೀತ ಪಾಟೀಲ ಅವರಿಗೆ, ವೃತ್ತಿಯಲ್ಲಿ ಪಶು ವೈದ್ಯರಾದ ಜಾನುವಾರು ಸಂರಕ್ಷಕರಾದ ವಿಕಲಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಸಹಾಯ ಸೌಕರ್ಯ ಮಾಡುತ್ತಿರುವ, ಪರಿಸರ, ನಾಡು ನುಡಿಯ ಲೇಖನ ಬರೆಯುವ ಡಾ.ಜಿ ಎಸ್ ಅಶ್ವತ್ಥಕುಮಾರ ಅವರಿಗೆ ಸಮಾರಂಭದಲ್ಲಿ ಬಸವ ಕಾರುಣ್ಯ ಪುರಸ್ಕಾರ 2026 ನೀಡಿ ಗೌರವಿಸಲಾಯಿತು. ಗವಿಸಿದ್ದಪ್ಪ ಕೊಪ್ಪಳ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಬಸವ ನೃತ್ಯ : ಐದನೇ ತರಗತಿ ವಿದ್ಯಾರ್ಥಿನಿ ರಿತಿಕಾ ಶೇಖರ ಇಂಗಳದಾಳ ಅವರು ಬಸವ ನೃತ್ಯಗೈದರು.

ಭಾಗ್ಯನಗರದ ಶ್ರೀ ಗುರುಕೃಪ ಕಲಾ ಸಂಘದ ಶಕುಂತಲಾ ಬೆನ್ನಾಳ ಹಾಗೂ ಸಂಗಡಿಗರು ವಚನ ಸಂಗೀತ ಹಾಗು ನಾಡಗೀತೆ ನಡೆಸಿಕೊಟ್ಟರು.

ಲೇಖಕ ಮಹೇಶ ಬಳ್ಳಾರಿ ಹಾಗೂ ವೀರೇಶ ಕೊಪ್ಪಳ ಅವರು ನಿರೂಪಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande