
ಬಳ್ಳಾರಿ, 21 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ ಶ್ರೀಧರಗಡ್ಡೆ ವಿದ್ಯುತ್ ಕೇಂದ್ರ ನಿರ್ವಹಣೆ ಕಾರ್ಯವನ್ನು ಕೈಗೊಳ್ಳುತ್ತಿರುವುರಿಂದ ನಾಳೆ ಬೆಳಿಗ್ಗೆ 09 ರಿಂದ ಸಂಜೆ 06 ಗಂಟೆಯವರೆಗೆ ಎಫ್-6 ವ್ಯಾಪ್ತಿಯ ಪ್ರದೇಶಗಳಾದ ತಾಳೂರು ರೋಡ್, ಸ್ನೇಹ ಕಾಲೋನಿ, ಶ್ರೀನಗರ, ರೇಣುಕಾ ನಗರ, ಭಗತ್ಸಿಂಗ್ ನಗರ, ಕನ್ನಡ ನಗರ, ಮಹಾನಂದಿ ಕೊಟ್ಟಂ, ಪಾರ್ವತಿ ನಗರ, ರಾಮ ನಗರ, ಪಾರ್ವತಿ ನಗರ, ಬಾಲಾಜಿ ಕಾಲೋನಿ, ಗಂಗಮ್ಮ ಕಾಲೋನಿ, ಜಿಲ್ಲಾ ಕೋರ್ಟ್ ಸಂಕೀರ್ಣ ಪ್ರದೇಶ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್