ಬಸವಣ್ಣನವರ ಒಂದು ವಚನ ಹಲವಾರು ಸಂದೇಶಗಳಿಗೆ ಸಮ : ಜಿಲ್ಲಾಧಿಕಾರಿ
ಹಾಸನ, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ಜಗಜ್ಯೋತಿ ಬಸವಣ್ಣನವರ ಒಂದು ವಚನ ಹಲವಾರು ಸಂದೇಶಗಳನ್ನು ನೀಡುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ಶ್ರೀ ಬಸವ ಜಯಂ
ಲತಾ ಕುಮಾರಿ


ಹಾಸನ, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಜಗಜ್ಯೋತಿ ಬಸವಣ್ಣನವರ ಒಂದು ವಚನ ಹಲವಾರು ಸಂದೇಶಗಳನ್ನು ನೀಡುತ್ತದೆ ಎಂದು ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿಂದು ಆಯೋಜಿಸಿದ್ದ ಶ್ರೀ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಲಿಂಗ ತಾರತಮ್ಯ ಬಗ್ಗೆ ಮೊದಲು ಧ್ವನಿ ಎತ್ತಿದ ಮಹನೀಯರು, ಬಸವಣ್ಣ ಜ್ಞಾನಿ ಮಾತ್ರವಲ್ಲ ದಕ್ಷ ಆಡಳಿತಗಾರ ಹಾಗೂ ಸಮಾಜ ಸುಧಾರಕರು ಆಗಿದ್ದರು ಎಂದು ತಿಳಿಸಿದರು.

ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ನೀಡಿದ

ಬಸವಣ್ಣನವರು ಸಮಾಜದ ಅಂಕುಡೊಂಕುಗಳನ್ನು ಎತ್ತಿ ಹಿಡಿದ ಶರಣರು ಎಂದು ತಿಳಿಸಿದರು.

ಸಾಂಪ್ರಾದಾಯಿಕ ದಂತಕಥೆಗಳು ಮತ್ತು ಜೀವನ ಚರಿತ್ರೆಯ ಗ್ರಂಥಗಳು ಇಂದಿಗೂ ಸಹ ಬಸವಣ್ಣನವರನ್ನು ಲಿಂಗಾಯತ ಸ್ಥಾಪಕ ಎಂದು ಹೇಳುತ್ತವೆ ಎಂದರು.

ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದ ಮಹಾನ್ ವ್ಯಕ್ತಿ ಬಸವಣ್ಣನವರು,

ಜೀವನದ ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಅನುಭವ ಮಂಟಪವನ್ನು ಸ್ಥಾಪನೆ ಮಾಡಿದವರು ಎಂದು ತಿಳಿಸಿದರು.

ಬಸವಣ್ಣನವರು ಕೇವಲ ಒಬ್ಬ ವ್ಯಕ್ತಿಯಲ್ಲ, ಅವರು ಒಂದು ವಿಚಾರಧಾರೆ. ಜಾತಿ-ಮತಗಳ ಬೇಧವಿಲ್ಲದ, ಸಮಾನತೆಯ ಸಮಾಜವನ್ನು ನಿರ್ಮಿಸುವ ಅವರ ಕನಸು ಇಂದಿಗೂ ಪ್ರಸ್ತುತವಾಗಿದೆ. ಇವರ ವಿಚಾರಗಳು ಮಾನವಕುಲಕ್ಕೆ ಸದಾ ದಾರಿದೀಪವಾಗಿವೆ. ಸಮಾಜದಲ್ಲಿ ಇರುವಂತಹ ಜಾತಿ ಧರ್ಮ ವರ್ಗಗಳ ನಡುವೆ ಕೂಡ ಒಂದು ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸಿದವರು ಭಕ್ತಿ ಭಂಡಾರಿ ಬಸವಣ್ಣನವರು ಎಂದರು.

ಪ್ರತಿಯೊಂದು ಕಾಯಕ ಮಾಡುವವರಿಗೂ ಸಹ ಸಮಾಜದಲ್ಲಿ ಗೌರವ ಇರಬೇಕೆಂದು ಪ್ರತಿಪಾದಿಸಿದರು, ಆತ್ಮವಿಶ್ವಾಸವಿದ್ದರೆ ಯಾವ ಕಾಯಕವೂ ಮೇಲಲ್ಲ ಯಾವ ಕಾಯಕವೂ ಕೀಳಲ್ಲ ಎಂದು ಬಸವಣ್ಣನವರು,ತೊರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಬಸವಣ್ಣನವರ ವಚನಗಳು ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹದ್ದಾಗಿದ್ದವು, ಇಂತಹ ಮಹನೀಯರು ಜನಿಸಿದ ನೆಲದಲ್ಲಿ ಜನಿಸಿರುವ ನಾವು ಧನ್ಯರು ಶರಣರ ತತ್ವ ಆದರ್ಶಗಳನ್ನು ಆಧಾರವಾಗಿ ಟ್ಟುಕೊಂಡು ಮಾದರಿಯಾಗಬೇಕು ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande