
ವಿಜಯಪುರ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಜಗಜ್ಯೋತಿ ಬಸವಣ್ಣ ಅವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಸಚಿವ ಶಿವಾನಂದ ಪಾಟೀಲ್ ಬಸವ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಬಸವಣ್ಣನವರ ಜನ್ಮಸ್ಥಳದ ಪವಿತ್ರ ಗರ್ಭಗೃಹದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. “ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ...” ಎಂಬ ಬಸವಣ್ಣನವರ ವಚನಗಳನ್ನು ಸ್ಮರಿಸುತ್ತಾ, ಪುಟ್ಟ ಬಸವಣ್ಣನ ಪ್ರತಿಮೆಯನ್ನು ತೊಟ್ಟಿಲಿನಲ್ಲಿ ತೂಗುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಬಸವಣ್ಣನವರು ಸಾರಿದ ಕಾಯಕ ತತ್ವ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಬಸವನ ಬಾಗೇವಾಡಿಯ ಶಾಸಕರು ಸಹ ಈ ಸಂದರ್ಭದಲ್ಲಿ ಭಕ್ತನಾಗಿ ಬಸವಣ್ಣನವರ ಪಾದಗಳಿಗೆ ನಮಸ್ಕರಿಸುವುದು ಪರಮ ಸೌಭಾಗ್ಯ ಎಂದು ಅಭಿಪ್ರಾಯಪಟ್ಟರು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ತಿಳಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / jyothi deshpande