ಮಲ್ಲೇಶ್ವರಂ ಉದ್ಯೋಗ ಮೇಳ ಉದ್ಘಾಟನೆ
ಬೆಂಗಳೂರು, 20 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಸವ ಜಯಂತಿಯ ಅಂಗವಾಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ “ಯುವೋತ್ಸವ - ಮಲ್ಲೇಶ್ವರಂ ಉದ್ಯೋಗ ಮೇಳ 2026” ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿ
ಶೋಭಾ ಕರಂದ್ಲಾಜೆ


ಬೆಂಗಳೂರು, 20 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಸವ ಜಯಂತಿಯ ಅಂಗವಾಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಯೋಜಿಸಲಾದ “ಯುವೋತ್ಸವ - ಮಲ್ಲೇಶ್ವರಂ ಉದ್ಯೋಗ ಮೇಳ 2026” ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉದ್ಘಾಟಿಸಿ ಮಾತನಾಡಿ, ಯುವಕರಿಗೆ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಕೈಗಾರಿಕಾ ಸಂಪರ್ಕ ಕಲ್ಪಿಸುವಂತಹ ಉಪಕ್ರಮಗಳು ದೇಶದ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಬಸವೇಶ್ವರ ಅವರ “ಕಾಯಕವೇ ಕೈಲಾಸ” ತತ್ವವನ್ನು ಸ್ಮರಿಸಿದ ಅವರು, ದುಡಿಯುವ ಪ್ರತಿಯೊಬ್ಬರಿಗೂ ಗೌರವ ಹಾಗೂ ಅವಕಾಶ ದೊರೆಯಬೇಕು ಎಂಬ ಬಸವಣ್ಣನ ಸಂದೇಶವೇ ಈ ಉದ್ಯೋಗ ಮೇಳದ ಆಶಯವಾಗಿದೆ ಎಂದು ತಿಳಿಸಿದರು.

ಈ ಉದ್ಯೋಗ ಮೇಳವು ಪ್ರತಿಭಾವಂತ ಯುವಕರು ಮತ್ತು ವಿವಿಧ ಕಂಪನಿಗಳು, ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ಉದ್ಯೋಗ ಹುಡುಕುತ್ತಿರುವ ಯುವಕರಿಗೆ ನೇರ ಸಂಪರ್ಕದ ವೇದಿಕೆಯನ್ನು ಒದಗಿಸಲಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವ ಮೂಲಕ ಯುವಕರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶ ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande