
ಬಾಗಲಕೋಟೆ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ನಗರದ ಹಳಪೇಟ ಮಡುವಿನ ಗುರು ಹಿರಿಯರು ಪ್ರತಿ ವರ್ಷದಂತೆ ಈ ವರ್ಷವೂ ದೇವಿಯ ಐದು ವಾರಗಳ ಆಚರಣೆಯನ್ನು ನಡೆಸಲು ನಿರ್ಧರಿಸಿದ್ದಾರೆ.
ಮೊದಲ ಮಂಗಳವಾರ 21-04-2026ರಂದು ಆರಂಭವಾಗುವ ಈ ಧಾರ್ಮಿಕ ಕಾರ್ಯಕ್ರಮವು ಮುಂದಿನ ವಾರಗಳಂತೆ ನಡೆಯಲಿದೆ —
ಎರಡನೇ ಮಂಗಳವಾರ: 28-04-2026
ಮೂರನೇ ಮಂಗಳವಾರ: 05-05-2026 ನಾಲ್ಕನೇ ಮಂಗಳವಾರ: 12-05-2026 ಐದನೇ ಮಂಗಳವಾರ: 19-05-2026 ಈ ಎಲ್ಲಾ ದಿನಗಳಲ್ಲಿ ಗ್ರಾಮ ದೇವತೆಗೆ “ಉಡಿ ತುಂಬುವ” ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಈ ಹಿನ್ನೆಲೆ ಬಾಗಲಕೋಟೆಯ ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಾರಗಳನ್ನು ಪಾಲಿಸುವಂತೆ ಗುರು ಹಿರಿಯರು ಮನವಿ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande