
ಗದಗ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮಹಿಳಾ ಮೀಸಲಾತಿ ವಿದಾಯಕವನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಪ್ರಮುಖ ಪಾತ್ರ ವಹಿಸಿದು, ಮಹಿಳೆಯರ ಏಳಿಗೆ ಸಮಾನತೆಯ ಬಗ್ಗೆ ಈ ಪಕ್ಷ ಕೇವಲ ಮಾತಿನಲ್ಲೇ ಮುಗಿಸಿ ಬಿಟ್ಟಿದೆ. ಈ ಪಕ್ಷದ ಪ್ರಮುಖ ಖಾತೆಯಲ್ಲಿರುವ ಮಹಿಳೆಯರ ಏಳಿಗೆಯನ್ನು ಎಲ್ಲಾ ಮಹಿಳೆಯರ ಏಳಿಗೆ ಎಂದು ತಿಳಿದಿರಬಹುದು ಅದಕ್ಕಾಗಿಯೇ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಮಹಿಳಾ ಮೀಸಲಾತಿಯ ವಿದೇಕವನ್ನು ಸೋಲಿಸಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ, ಕಾಂಗ್ರೆಸ್ ಪಕ್ಷದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡನೆ ಆದರೆ ಅದರ ಅನುಗುಣವಾಗಿ ಮೀಸಲಾತಿಗಳು ಕಾನೂನು ಪ್ರಕಾರ ತಾವಾಗಿಯೇ ಬರುತ್ತವೆ ಇಂಡಿಕೂಟದ ನಾಯಕರು ಈ ಮೀಸಲಾತಿಯ ನಾಟಕ ಮಾಡಿ ಈ ವಿಧೇಯಕವನ್ನು ವಿರೋಧಿಸಿ ಸೋಲಿಸಿ ಈಗ ಈ ನಪ ಹೇಳುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚುವ ಪ್ರಯತ್ನವೆಂದು ವೆಂಕನಗೌಡ ಆರ್. ಗೋವಿಂದಗೌಡ್ರ ಅಭಿಪ್ರಾಯಪಟ್ಟಿದ್ದಾರೆ.
ಕ್ಷೇತ್ರಗಳು ಸಣ್ಣ ವಾದಂತೆ ಆಡಳಿತ ಸುಧಾರಣೆಗೆ, ಅಭಿವೃದ್ಧಿಗೆ ಅನುಕೂಲವಾಗಲಿದೆ ಆದರೆ ಈ ಇಂಡಿಕೂಟದ ನಾಟಕ ಜನರಿಗೆ ಗೊತ್ತಾಗಿದ್ದು ಇದಕ್ಕೆ ಇವರು ದೊಡ್ಡಬೆಲೆ ತರಬೇಕಾಗುತ್ತದೆ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್ ಗೋವಿಂದಗೌಡ್ರ ಇಂಡಿಕೂಟದ ಈ ಕಪಟ ನಾಟಕವನ್ನು ಕಟುವಾಗಿ ಟೀಕಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP