
ಗದಗ, 20 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗದಗ ನಗರದ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಕಾರ್ಯಲಯದಲ್ಲಿ ಮಹಾಮಾನವತವಾದಿ, ಶ್ರೇಷ್ಠದಾರ್ಶನಿಕ, ಸಮಾಜ ಸುಧಾರಕ, ಜಗದಜ್ಯೋತಿ ಬಸವೇಶ್ವರರ 921 ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿರವರು ಮಾತನಾಡುತ್ತ 12ನೇ ಶತಮಾನದಲ್ಲಿ ಮಹತ್ಮ ಬಸವೇಶ್ವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೊಣಾ. ನಮ್ಮ ಮಕ್ಕಳಿಗೆ ವಾರಕ್ಕೆ ಒಂದಾದರೂ ಬಸವೇಶ್ವರರ ವಚನಗಳನ್ನು ಅವರಿಗೆ ಕಲಿಸಬೇಕು ಅದರಂತೆ ಆಚರಣೆಯನ್ನು ಮಾಡಬೇಕು. 12ನೇ ಶತಮಾನದ ಮಾದರಿಯ ಸಂವಿಧಾನವೇ ಇಂದು ಭಾರತದಲ್ಲಿ ನಡೆಯುತ್ತಿದ್ದು, ಸಂವಿಧಾನದ ಮೂಲ ಪುರಷರೇ ಮಹತ್ಮ ಬಸವೇಶ್ವರರು ಎಂದು ಮಾತನಾಡಿದರು.
ಪ್ರಮುಖರಾದ ಶ್ರೀಪತಿ ಉಡುಪಿ ಮಾತನಾಡಿ 12ನೇ ಶತಮಾನದಲ್ಲಿ ಇದ್ದಂತ ಅಸ್ಪೃಶ್ಯತೆ ಹೊಗಲಾಡಿಸಲು ಬಸವೇಶ್ವರರು ಹೋರಾಟ ಮಾಡಿದರು. ಎಲ್ಲ ಜಾತಿ ಅವರಿಗೂ ಸಮಾನ ಅವಕಾಶವನ್ನು ನೀಡಿ ಅವರನ್ನು ಕೂಡ ಸಮಾಜದ ಮುಖ್ಯ ವಾಹಿನಿಯಲ್ಲಿ ತೆಗೆದುಕೊಂಡು ಬಂದರು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದ ವಚನದಿಂದ ಇವತ್ತು ನಾವು ಮಾಡುವ ಕಾಯಕವನ್ನು ಬಹಳ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡಿದಾಗ ದೇವರು ವಲಿಯುವನು ಎಂದು ಮಾತನಾಡಿದರು.
ಗದಗ ನಗರ ಮಂಡಲ ಅಧ್ಯಕ್ಷರಾದ ಸುರೇಶ ಮರಳಪ್ಪನವರ ಮಾಡನಾಡಿ ನಾವು ಮಾಡುವ ಉದ್ಯೋಗದಿಂದ ಜಾತಿ ಸೃಷ್ಠಿಯಾಯಿತು. ಮಣ್ಣಿನ ಕೆಲಸವನ್ನು ಮಾಡುವ ಕುಂಬಾರನಾದ, ಬಟ್ಟೆ ತೊಳೆಯುವವ ಮಡಿವಾಳನಾದ, ಕಬ್ಬಿಣ ಕೆಲಸ ಮಾಡುವವ ಕಮ್ಮಾರನಾದ ಈ ರೀತಿಯಾಗಿ ನಾವು ಮಾಡುವ ಕಾಯಕದಿಂದ ಜಾತಿಗಳು ಹುಟ್ಟಿದವು. ಮಹತ್ಮ ಬಸವೇಶ್ವರರು ಎಲ್ಲ ಜಾತಿಯವರನ್ನು ಸಮನಾಗಿ ಕರೆದುಕೊಂಡು ಹೋದರು ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂತೋಷ ಅಕ್ಕಿ ಹಾಗು ಗದಗ-ಬೆಟಗೇರಿ ನಗರಸಭಾ ಸದಸ್ಯರಾದ ಅನೀಲ ಅಬ್ಬಿಗೇರಿ ರವರು ಸಂದರ್ಭಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯರಾದ ಮಹಾಂತೇಶ ಬಾತಾಖಾನಿ, ಪದ್ಮೀನಿ ಮುತ್ತಲದಿನ್ನಿ, ಡಿ.ಬಿ.ಕರೀಗೌಡ್ರ, ದೇವೆಂದ್ರಪ್ಪ ಹೂಗಾರ, ರವಿ ಮಾನ್ವಿ, ಯು ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಬಸವರಾಜ ನರೆಗಲ್, ಮಲ್ಲಿಕಾರ್ಜುನ ಗೊರವರ, ಮಂಜುನಾಥ ಪಟ್ಟಣಶೆಟ್ಟಿ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP