ವಿಜಯಪುರ ರೈತರಿಗೆ ಸುವರ್ಣಾವಕಾಶ : ಕೃಷ್ಣಾ ಮೇಲ್ದಂಡೆ ಯೋಜನೆ ಭೂಸಂತ್ರಸ್ತರಿಗೆ ವಿಶೇಷ ಲೋಕ ಅದಾಲತ್
ವಿಜಯಪುರ, 19 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಭೂಮಿ ನೀಡಿದ ವಿಜಯಪುರ ಜಿಲ್ಲೆಯ ರೈತ ಬಾಂಧವರಿಗೆ ನ್ಯಾಯಯುತ ಪರಿಹಾರ ಪಡೆಯಲು ಮಹತ್ವದ ಅವಕಾಶ ಒದಗಿದೆ. ಭೂಸ್ವಾಧೀನದ ಪರಿಹಾರಕ್ಕಾಗಿ ವರ್ಷಗಳಿಂದ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿರುವ ಭೂಸಂತ್ರಸ್ತರಿಗೆ ಇದೀಗ ವಿ
ಲೋಕ ಅದಾಲತ್


ವಿಜಯಪುರ, 19 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಭೂಮಿ ನೀಡಿದ ವಿಜಯಪುರ ಜಿಲ್ಲೆಯ ರೈತ ಬಾಂಧವರಿಗೆ ನ್ಯಾಯಯುತ ಪರಿಹಾರ ಪಡೆಯಲು ಮಹತ್ವದ ಅವಕಾಶ ಒದಗಿದೆ. ಭೂಸ್ವಾಧೀನದ ಪರಿಹಾರಕ್ಕಾಗಿ ವರ್ಷಗಳಿಂದ ನ್ಯಾಯಾಲಯಗಳಲ್ಲಿ ಹೋರಾಟ ನಡೆಸುತ್ತಿರುವ ಭೂಸಂತ್ರಸ್ತರಿಗೆ ಇದೀಗ ವಿಶೇಷ ‘ಲೋಕ ಅದಾಲತ್’ ನೆರವಾಗಲಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ವಿಜಯಪುರ ಜಿಲ್ಲಾ ನ್ಯಾಯಾಲಯ ಸೇವಾ ಪ್ರಾಧಿಕಾರ ವತಿಯಿಂದ 2026ರ ಏಪ್ರಿಲ್ನಿಂದ ಜುಲೈವರೆಗೆ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದ್ದು, ಹೆಚ್ಚಿನ ಪರಿಹಾರಕ್ಕಾಗಿ ಕೋರ್ಟ್ನಲ್ಲಿ ಹೋರಾಟ ನಡೆಸುತ್ತಿರುವ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಈ ಲೋಕ ಅದಾಲತ್ನ ವಿಶೇಷತೆ ಎಂದರೆ, ಯಾವುದೇ ವಕೀಲರ ಶುಲ್ಕವಿಲ್ಲದೆ ಪರಸ್ಪರ ಒಪ್ಪಿಗೆಯೊಂದಿಗೆ ಕೇವಲ ಒಂದೇ ದಿನದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಇದರಿಂದ ದೀರ್ಘಕಾಲದ ನ್ಯಾಯಾಲಯದ ಅಲೆದಾಟದಿಂದ ಮುಕ್ತಿ ಪಡೆಯಲು ಸಹಾಯಕವಾಗಲಿದೆ ಎಂದರು.

ಆಸಕ್ತ ರೈತರು ವಿಜಯಪುರದ 1ನೇ ಹಾಗೂ 3ನೇ ಹೆಚ್ಚುವರಿ ನ್ಯಾಯಾಲಯಗಳಿಗೆ ಭೇಟಿ ನೀಡಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಭೂಸ್ವಾಧೀನ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಸಮಯ:

ಏಪ್ರಿಲ್ & ಮೇ: ಮಧ್ಯಾಹ್ನ 12.30 ರಿಂದ 1.30ರವರೆಗೆ

ಜೂನ್ & ಜುಲೈ: ಸಂಜೆ 4.45 ರಿಂದ 5.45ರವರೆಗೆ

ಭೂಸಂತ್ರಸ್ತ ರೈತರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಹಕ್ಕಿನ ಪರಿಹಾರವನ್ನು ಶೀಘ್ರದಲ್ಲೇ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande