
ಶಿವಮೊಗ್ಗ, 19 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಮೈಸೂರು ವಿಭಾಗದ ಜಿಲ್ಲೆಗಳಾದ ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಉಡುಪಿ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳ ಸರ್ಕಾರಿ ನಿವೃತ್ತ/ಕುಟುಂಬ ಪಿಂಚಣಿದಾರರ ಕುಂದುಕೊರತೆಗಳ ನಿವಾರಣೆಗಾಗಿ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಏ.22 ರಂದು ಬೆಳಗ್ಗೆ 11.00ಕ್ಕೆ ಪಿಂಚಣಿ ಅದಾಲತ್ ಹಾಗೂ ಮಧ್ಯಾಹ್ನ ಜಿಪಿಎಫ್ ಚಂದಾದಾರರ ಕುಂದುಕೊರತೆಗಳ ನಿವಾರಣೆಗಾಗಿ ”ಜಿಪಿಎಫ್ ಅದಾಲತ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಪಿಂಚಣಿದಾರರು ಬೆಳಿಗ್ಗೆ 11 ಗಂಟೆಗೆ ಎ.ಸಿ.ಕಚೇರಿಯ ಕೆ-ಸ್ವಾನ್-ವಿ.ಸಿ. ಸಭಾಂಗಣದಲ್ಲಿ ನಡೆಯುವ ಪಿಂಚಣಿ ಮತ್ತು ಜಿಪಿಎಫ್ ಅದಾಲತ್ನಲ್ಲಿ ಭಾಗವಹಿಸಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ಸಲ್ಲಿಸಬಹುದಾಗಿದೆ. ಅಥವಾ ಶಿವಮೊಗ್ಗ ಜಿಲ್ಲಾ ಖಜಾನೆಯ ಉಪನಿರ್ದೇಶಕರ ಕಚೇರಿಯಲ್ಲಿ ಮುಂಚಿತವಾಗಿ ವಿವರಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa