ಬೆಂಗಳೂರಿನಲ್ಲಿ ‘ಡಕಾಯತ್’ ಸಿನಿಮಾ ತಂಡ
ಬೆಂಗಳೂರು, 18 ಏಪ್ರಿಲ್ (ಹಿ.ಸ.) : ಆ್ಯಂಕರ್ : ಡಕಾಯತ್ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಚಿತ್ರದ ತಂಡ ಶನಿವಾರ ಬೆಂಗಳೂರಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿತು. ಚಿತ್ರದಲ್ಲಿ ನಟಿಸಿರುವ ಅಡವಿ ಶೇಷ್ ಮತ್ತು ಅನುರಾಗ್ ಕಶ್ಯಪ್ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ನಡೆಸಿದರು. ಇದೇ ವೇಳೆ
Film


ಬೆಂಗಳೂರು, 18 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಡಕಾಯತ್ ಚಿತ್ರದ ಯಶಸ್ಸಿನ ಹಿನ್ನಲೆಯಲ್ಲಿ ಚಿತ್ರದ ತಂಡ ಶನಿವಾರ ಬೆಂಗಳೂರಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿತು.

ಚಿತ್ರದಲ್ಲಿ ನಟಿಸಿರುವ ಅಡವಿ ಶೇಷ್ ಮತ್ತು ಅನುರಾಗ್ ಕಶ್ಯಪ್ ಬೆಂಗಳೂರಿಗೆ ಬಂದು ಚಿತ್ರದ ಪ್ರಚಾರ ನಡೆಸಿದರು. ಇದೇ ವೇಳೆ ಅವರು ನಗರದ ಜನಪ್ರಿಯ ಉಪಹಾರ ಮಂದಿರವಾದ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದು ಅಭಿಮಾನಿಗಳ ಜೊತೆ ಕೆಲಕಾಲ ಕಳೆಯುವ ಮೂಲಕ ಗಮನ ಸೆಳೆದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡವಿ ಶೇಷ್, ತಮ್ಮ ಪ್ರತಿಯೊಂದು ಸಿನಿಮಾಗೂ ಕನ್ನಡಿಗರು ಉತ್ತಮ ಬೆಂಬಲ ನೀಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ತಮ್ಮ ಅಭಿನಯದ ಬಹುತೇಕ ಚಿತ್ರಗಳ ಪ್ರಚಾರವನ್ನು ಬೆಂಗಳೂರಿನಲ್ಲಿ ನಡೆಸಿರುವುದಾಗಿ ಹೇಳಿದ ಅವರು, ಈ ಬಾರಿ ಕೂಡ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿರುವುದು ಖುಷಿ ತಂದಿದೆ ಎಂದರು.

ಅನುರಾಗ್ ಕಶ್ಯಪ್ ಮಾತನಾಡಿ, “ಈಗ ನಾನು ಬೆಂಗಳೂರಿನವನೇ. ನನ್ನನ್ನು ಪ್ರತ್ಯೇಕವಾಗಿ ಸ್ವಾಗತಿಸುವ ಅವಶ್ಯಕತೆ ಇಲ್ಲ” ಎಂದು ಹಾಸ್ಯಚಟಾಕಿ ಹಾರಿಸಿದರು. ಚಿತ್ರದ ಟ್ರೇಲರ್ ನೋಡಿದರೆ ಇದು ಮಾಸ್ ಸಿನಿಮಾ ಎನ್ನುವ ಭಾವನೆ ಮೂಡಬಹುದು. ಆದರೆ ಇದು ಒಳ್ಳೆಯ ಪ್ರೇಮಕಥೆಯನ್ನೊಳಗೊಂಡ ಸಿನಿಮಾ ಎಂದು ಅವರು ಹೇಳಿದರು.

ಅವರು, ಡಕಾಯತ್ ಚಿತ್ರವು ಈಗಾಗಲೇ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಬೆಂಗಳೂರಿನ ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ನಂತರ ಜಿಟಿ ಮಾಲ್ಗೆ ಭೇಟಿ ನೀಡಿದ ಅಡವಿ ಶೇಷ್ ಮತ್ತು ಅನುರಾಗ್ ಕಶ್ಯಪ್, ಚಿತ್ರ ವೀಕ್ಷಣೆಗೆ ಬಂದ ಅಭಿಮಾನಿಗಳನ್ನು ಭೇಟಿಯಾಗಿ ಸಂಭ್ರಮಿಸಿದರು.

ಡಕಾಯತ್ ಚಿತ್ರದಲ್ಲಿ ಅಡವಿ ಶೇಷ್, ಮೃಣಾಲ್ ಠಾಕೂರ್, ಅನುರಾಗ್ ಕಶ್ಯಪ್, ಪ್ರಕಾಶ್ ರಾಜ್, ಸುನೀಲ್ ಮತ್ತು ಅತುಲ್ ಕುಲಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಚಿತ್ರವನ್ನು ಶನೀಲ್ ಡಿಯೋ ನಿರ್ದೇಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande