ರೈಲು ಸೇವೆಗಳ ಮರುಸ್ಥಾಪನೆ ಮತ್ತು ಪರಿಷ್ಕರಣೆ
ಮೈಸೂರು, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ಸುಬ್ರಹ್ಮಣ್ಯ ರೋಡ್, ಎಡಮಂಗಲ ಹಾಗೂ ನರಿಮೊಗರು ವಿಭಾಗಗಳ ನಡುವೆ ಹಳಿ ಮತ್ತು ವಿದ್ಯುತ್ ನಿರ್ವಹಣಾ ಕಾಮಗಾರಿಗಳಿಗಾಗಿ ಮೊದಲು ರದ್ದು, ನಿಯಂತ್ರಣ ಹಾಗೂ ಮರುನಿಗದಿಗೊಳಿಸಲಾಗಿದ್ದ ಕೆಳಗಿನ ರೈಲು ಸೇವೆಗಳನ್ನು ಇದೀಗ ಮರುಸ್ಥಾಪಿಸಿ, ಪರಿಷ್ಕರಿಸಲಾಗಿದೆ. ರೈಲು
ರೈಲು ಸೇವೆಗಳ ಮರುಸ್ಥಾಪನೆ ಮತ್ತು ಪರಿಷ್ಕರಣೆ


ಮೈಸೂರು, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಸುಬ್ರಹ್ಮಣ್ಯ ರೋಡ್, ಎಡಮಂಗಲ ಹಾಗೂ ನರಿಮೊಗರು ವಿಭಾಗಗಳ ನಡುವೆ ಹಳಿ ಮತ್ತು ವಿದ್ಯುತ್ ನಿರ್ವಹಣಾ ಕಾಮಗಾರಿಗಳಿಗಾಗಿ ಮೊದಲು ರದ್ದು, ನಿಯಂತ್ರಣ ಹಾಗೂ ಮರುನಿಗದಿಗೊಳಿಸಲಾಗಿದ್ದ ಕೆಳಗಿನ ರೈಲು ಸೇವೆಗಳನ್ನು ಇದೀಗ ಮರುಸ್ಥಾಪಿಸಿ, ಪರಿಷ್ಕರಿಸಲಾಗಿದೆ.

ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಹಾಗೂ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳನ್ನು 10 ಜೂನ್ 2026ರಿಂದ 21 ಜೂನ್ 2026ರವರೆಗೆ ರದ್ದುಪಡಿಸಲಾಗಿತ್ತು. ಇದೀಗ ಈ ರೈಲುಗಳನ್ನು ಮರುಸ್ಥಾಪಿಸಲಾಗಿದ್ದು, ನಿಗದಿತ ಸಮಯ ಮತ್ತು ಮಾರ್ಗದಲ್ಲೇ ಸಂಚರಿಸಲಿವೆ.

ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್ – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 21.04.2026ರಿಂದ 09.06.2026ರವರೆಗೆ 55 ನಿಮಿಷಗಳ ನಿಯಂತ್ರಣ ಇರಲಿದೆ ಎಂದು ಮೊದಲು ತಿಳಿಸಲಾಗಿತ್ತು. ಇದೀಗ ಇದರಲ್ಲಿ ಪರಿಷ್ಕರಣೆ ಮಾಡಲಾಗಿದೆ. 16.04.2026ರಿಂದ 04.06.2026ರವರೆಗೆ ಆರಂಭವಾಗುವ ಪ್ರಯಾಣಗಳಲ್ಲಿ ಈ ರೈಲು ಮಾರ್ಗಮಧ್ಯೆ 35 ನಿಮಿಷಗಳ ಕಾಲ ಮಾತ್ರ ನಿಯಂತ್ರಣಕ್ಕೆ ಒಳಪಡಲಿದೆ. 05.06.2026ರಿಂದ 09.06.2026ರವರೆಗೆ ಉಳಿದ ದಿನಗಳಲ್ಲಿ ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿದೆ.

ಇದಲ್ಲದೆ, ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು 15 ನಿಮಿಷ ಮರುನಿಗದಿ ಮಾಡುವ ದಿನಾಂಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ. ಮೊದಲು 21, 23, 25, 28 ಹಾಗೂ 30 ಏಪ್ರಿಲ್ 2026; 02, 05, 07, 09, 12, 14, 16, 19, 21, 23, 26, 28 ಹಾಗೂ 30 ಮೇ 2026; ಮತ್ತು 02, 04, 06 ಹಾಗೂ 09 ಜೂನ್ 2026ರಂದು ಆರಂಭವಾಗುವ ಪ್ರಯಾಣಗಳಿಗೆ 15 ನಿಮಿಷ ತಡವಾಗಿ ಸಂಚರಿಸುವಂತೆ ತಿಳಿಸಲಾಗಿತ್ತು.

ಪರಿಷ್ಕೃತ ವೇಳಾಪಟ್ಟಿಯಂತೆ, ಇದೀಗ ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ - ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ 16, 18, 21, 23, 25, 28 ಹಾಗೂ 30 ಏಪ್ರಿಲ್ 2026; 02, 05, 07, 09, 12, 14, 16, 19, 21, 23, 26, 28 ಹಾಗೂ 30 ಮೇ 2026; ಹಾಗೂ 02 ಮತ್ತು 04 ಜೂನ್ 2026ರಂದು ಆರಂಭವಾಗುವ ಪ್ರಯಾಣಗಳಲ್ಲಿ 15 ನಿಮಿಷ ಮರುನಿಗದಿಗೊಳಿಸಿ ಸಂಚರಿಸಲಿದೆ.

ಹಿಂದೆ ಸೂಚಿಸಲಾಗಿದ್ದ ಉಳಿದ ದಿನಗಳಲ್ಲಿ, ಅಂದರೆ 06.06.2026 ಮತ್ತು 09.06.2026ರಂದು, ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿದೆ ಎಂದು ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande