
ಶಿವಮೊಗ್ಗ, 16 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ಏ. 18 ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ರವರೆಗೆ ಅಂಬೇಡ್ಕರ್ ಭವನದಿಂದ ಮಲ್ಟಿಲೆವಲ್ ಕಾರ್ ಪಾರ್ಕಿಂಗ್ವರೆಗೆ ಕಂಬ ತೆರವುಗೊಳಿಸುವ ಕಾಮಗಾರಿ ಇರುವುದರಿಂದ ಕಸ್ತೂರಬಾ ರಸ್ತೆ, ಮಹಾನಗರ ಪಾಲಿಕೆ, ವೀರಶೈವ ಕಲ್ಯಾಣ ಮಂಟಪ ಹತ್ತಿರ, ಅಂಬೇಡ್ಕರ್ ರಸ್ತೆ, ನೆಹರು ರಸ್ತೆ, ಬಸವಸದನ ಹತ್ತಿರ, ಕಲ್ಯಾಣ ಜ್ಯುವೆಲರಿ, ವೆಂಕಟೇಶ್ವರ ಸ್ವೀಟ್ ಹೌಸ್, ಶಿವಪ್ಪ ನಾಯಕ ಸರ್ಕಲ್, ಹೂ ಮಾರುಕಟ್ಟೆ, ಗಾಂಧಿಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa