ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ತರಬೇತಿ ಕಾರ್ಯಗಾರ
ಬಳ್ಳಾರಿ, 16 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಇವರ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರವು 15 ದಿನಗಳ ಕಾಲ ಬೆಳಿಗ್ಗೆ 09 ರಿಂದ ಮಧ್ಯಾಹ್ನ 01.30 ಗಂಟೆಯ ವರೆಗೆ ನಗರದ ಪಾರ್ವತಿ ನಗರ ಬಡಾವಣೆಯ 2ನೇ ಕ್ರಾಸ್ ನ ಸರ್ಕಾರಿ ಕನ್ನಡ
ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ತರಬೇತಿ ಕಾರ್ಯಗಾರ


ಬಳ್ಳಾರಿ, 16 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಇವರ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರವು 15 ದಿನಗಳ ಕಾಲ ಬೆಳಿಗ್ಗೆ 09 ರಿಂದ ಮಧ್ಯಾಹ್ನ 01.30 ಗಂಟೆಯ ವರೆಗೆ ನಗರದ ಪಾರ್ವತಿ ನಗರ ಬಡಾವಣೆಯ 2ನೇ ಕ್ರಾಸ್ ನ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿವೆ. ಆಸಕ್ತ ಮಕ್ಕಳು ಭಾಗವಹಿಸಬಹುದಾಗಿದೆ.

ಶಿಬಿರವು ವಿವಿಧ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲೆ, ಜೇಡಿಮಣ್ಣಿನ ಕಲೆ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗ, ಕರಾಟೆ, ಇತರೆ ಚಟುವಟಿಕೆಗಳು ನಡೆಯಲಿದ್ದು, ಕಾರ್ಯಕ್ರಮಕ್ಕೆ 05 ರಿಂದ 16 ವರ್ಷದೊಳಗಿನ ಆಸಕ್ತಿಯುಳ್ಳ ಸರ್ಕಾರಿ ಶಾಲೆ ಮಕ್ಕಳು, ಗ್ರಾಮೀಣ ಪ್ರದೇಶ ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಸುಧಾರಣಾ ಸಂಸ್ಥೆಗಳ ಬಾಲಕರು-ಬಾಲಕಿಯರ ಬಾಲ ಮಂದಿರದ ಮಕ್ಕಳು ಭಾಗವಹಿಸಬಹುದು.

ಬೇಸಿಗೆ ಶಿಬಿರದ ಚಟುವಟಿಕೆಗಳಲ್ಲಿ 100 ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ ಇರುತ್ತದೆ. ಹಾಗಾಗಿ ನೋಂದಾಯಿಸಿಕೊಳ್ಳಲು ಏ.24 ರಂದು ಸಂಜೆ 05 ಗಂಟೆಯೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಂರ್ಪಕಿಸಬಹುದು. ಮೊದಲು ಬಂದು ತಮ್ಮ ಮಕ್ಕಳ ಹೆಸರು ನೋಂದಾಯಿಸಿದಲ್ಲಿ ಬೇಸಿಗೆ ಶಿಬಿರ ಚಟುವಟಿಕೆಗಳಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂ.08392-266219, ಕಚೇರಿ ಸಹಾಯಕ ಜೀರ್ ಮಲ್ಲಿಕಾರ್ಜುನ (ಮೊ.9741965198) ಇವರಿಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande