
ನವದೆಹಲಿ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ಎರಡು ರಾಜ್ಯಗಳ ಅಧಿಕೃತ ಪ್ರವಾಸವನ್ನು ಆರಂಭಿಸುತ್ತಿದ್ದು, ಇಂದು ಮತ್ತು ನಾಳೆ ಗುಜರಾತ್ ಹಾಗೂ ಏಪ್ರಿಲ್ 15–16ರಂದು ಮಹಾರಾಷ್ಟ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿಗಳ ಸಚಿವಾಲಯದ ಮಾಹಿತಿ ಪ್ರಕಾರ, ಇಂದು ಅವರು ರಾಜ್ಕೋಟ್ನಲ್ಲಿ ಇರುವ ಏಮ್ಸ ಸಂಸ್ಥೆಯ ಮೊದಲ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಏಪ್ರಿಲ್ 14ರಂದು ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಗಾಂಧಿನಗರದ ಲೋಕ ಭವನದಲ್ಲಿ ನಡೆಯುವ ‘ಸಾಮಾಜಿಕ ಸಾಮರಸ್ಯ ಉತ್ಸವ’ದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಏಪ್ರಿಲ್ 15ರಂದು ನಾಗ್ಪುರನಲ್ಲಿ ಇರುವ ಏಮ್ಸ ನಾಗ್ಪುರನ ಎರಡನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ಭಾಗವಹಿಸಲಿದ್ದಾರೆ. ಇದೇ ದಿನ ಅವರು ರಾಷ್ಟ್ರೀಯ ನೇರ ತೆರಿಗೆಗಳ ಅಕಾಡೆಮಿಯಲ್ಲಿ ಭಾರತೀಯ ಕಂದಾಯ ಸೇವೆಯ (ಐಆರ್ಎಸ್) 78ನೇ ಬ್ಯಾಚ್ ತರಬೇತಿ ಅಧಿಕಾರಿಗಳ ಸಮಾರೋಪ ಸಮಾರಂಭದಲ್ಲಿಯೂ ಭಾಗವಹಿಸಲಿದ್ದಾರೆ.
ಏಪ್ರಿಲ್ 16ರಂದು ವಾರ್ಧಾದಲ್ಲಿರುವ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಹಿಂದಿ ವಿಶ್ವವಿದ್ಯಾಲಯದ ಆರನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳು ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa