
ನವದೆಹಲಿ, 13 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವುದು ಹಾಗೂ ಶಾಂತಿ ಮಾತುಕತೆಗಳು ವಿಫಲವಾಗಿರುವ ಹಿನ್ನೆಲೆ ಜಾಗತಿಕ ಷೇರು ಮಾರುಕಟ್ಟೆಗಳು ಇಂದು ದುರ್ಬಲ ಸೂಚನೆಗಳನ್ನು ನೀಡುತ್ತಿವೆ. ಇದರ ಪರಿಣಾಮವಾಗಿ ಏಷ್ಯಾದ ಮಾರುಕಟ್ಟೆಗಳಲ್ಲಿ ವ್ಯಾಪಕ ಮಾರಾಟದ ಒತ್ತಡ ಕಂಡುಬಂದಿದೆ.
ಹಿಂದಿನ ವಹಿವಾಟಿನಲ್ಲಿ ಅಮೆರಿಕದ ಪ್ರಮುಖ ಸೂಚ್ಯಂಕವಾದ ಎಸ್&ಪಿ 500 ಶೇ. 0.11ರಷ್ಟು ಕುಸಿದು 6,816.89 ಅಂಕಗಳಲ್ಲಿ ಮುಕ್ತಾಯಗೊಂಡಿತು. ಇನ್ನೊಂದೆಡೆ ನಾಸ್ಡಾಕ್ ಸೂಚ್ಯಂಕ ಶೇ. 0.35ರಷ್ಟು ಏರಿಕೆ ಕಂಡು 22,902.89 ಅಂಕಗಳಲ್ಲಿ ವಹಿವಾಟು ಕೊನೆಗೊಳಿಸಿತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಡೌ ಜೋನ್ಸ ಪ್ಯುಚರ್ 344.57 ಅಂಕಗಳು ಅಥವಾ ಶೇ. 0.72ರಷ್ಟು ಕುಸಿದು 47,570 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.
ಯುರೋಪಿನ ಮಾರುಕಟ್ಟೆಗಳಲ್ಲಿಯೂ ಮಿಶ್ರ ಧೋರಣೆ ಕಂಡುಬಂದಿದ್ದು, ಎಪಟಿಎಸಿ 100 ಶೇ. 0.03ರಷ್ಟು ಕುಸಿತ ಕಂಡರೆ, ಡಿಎಎಕ್ಸ ಶೇ. 0.01ರಷ್ಟು ಇಳಿಕೆಯಾಯಿತು. ಮತ್ತೊಂದೆಡೆ ಸಿಎಸಿ 40 ಶೇ. 0.17ರಷ್ಟು ಏರಿಕೆಯೊಂದಿಗೆ ಮುಕ್ತಾಯಗೊಂಡಿತು.
ಏಷ್ಯಾದ ಮಾರುಕಟ್ಟೆಗಳಲ್ಲಿ ಇಂದು ಸ್ಪಷ್ಟವಾಗಿ ದುರ್ಬಲತೆ ಆವರಿಸಿದ್ದು, ನಿಕ್ಕಿ 225 ಶೇ. 1.04ರಷ್ಟು ಕುಸಿದು 56,330 ಅಂಕಗಳಿಗೆ ಇಳಿದಿದೆ. ಹ್ಯಾಂಗ್ ಸೆಂಗ್ ಶೇ. 1.01ರಷ್ಟು ಕುಸಿದು 25,632 ಅಂಕಗಳಿಗೆ ತಲುಪಿದೆ. ದಕ್ಷಿಣ ಕೊರಿಯಾದ ಕೋಸ್ಪಿ ಶೇ. 1.27ರಷ್ಟು ಇಳಿಕೆಯಾಗಿದ್ದು 5,784.37 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ.
ಇನ್ನು ಶಾಂಘೈ ಕಾಂಪೋಸ್ಟ್ ಶೇ. 0.17ರಷ್ಟು ಹಾಗೂ ಸ್ಟ್ರೈಟ್ಸ್ ಟೈಮ್ಸ್ ಇಂಡೆಕ್ಸ್ ಶೇ. 0.39ರಷ್ಟು ಕುಸಿತ ಕಂಡಿವೆ. ಜಕಾರ್ತಾ ಕಾಂಪೋಸಿಟ್ ಸೂಚ್ಯಂಕವು ಶೇ. 0.07ರಷ್ಟು ಇಳಿಕೆಯಾಗಿದೆ. ಆದರೆ ತೈವಾನ್ ಸೂಚ್ಯಂಕ ಮಾತ್ರ ಅಲ್ಪ ಪ್ರಮಾಣದಲ್ಲಿ ಏರಿಕೆಯನ್ನು ದಾಖಲಿಸಿದೆ.
ಇದರ ಜೊತೆಗೆ ಗಿಪ್ಟ ನಿಪ್ಟಿ 442.50 ಅಂಕಗಳು ಅಥವಾ ಶೇ. 1.84ರಷ್ಟು ಕುಸಿದು 23,649 ಮಟ್ಟ ತಲುಪಿರುವುದು ಭಾರತೀಯ ಮಾರುಕಟ್ಟೆಯ ಆರಂಭವೂ ದುರ್ಬಲವಾಗಿರಬಹುದೆಂಬ ಸೂಚನೆ ನೀಡುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa