ಗಂಡೇರ್ಬಲ್ ಎನ್ಕೌಂಟರ್ : ಒರ್ವ ಉಗ್ರ ಬಲಿ; ಮುಂದುವರೆದ ಕಾರ್ಯಾಚರಣೆ
ಶ್ರೀನಗರ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗಂಡೇರ್ಬಲ್ ಜಿಲ್ಲೆನಲ್ಲಿ ರಾತ್ರಿಯಿಡೀ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ಸೇನೆ ಬುಧವಾರ ತಿಳಿಸಿದೆ. ಅರ್ಹಾಮಾ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನಗಳ ಬಗ್ಗೆ ದೊರೆತ ಗುಪ್ತಚರ ಮಾಹಿತಿಯ ಮೇರೆಗೆ ಮಂಗಳವಾರ ರಾತ್ರಿ ಭದ್
ಗಂಡೇರ್ಬಲ್ ಎನ್ಕೌಂಟರ್ : ಒರ್ವ ಉಗ್ರ ಬಲಿ; ಮುಂದುವರೆದ ಕಾರ್ಯಾಚರಣೆ


ಶ್ರೀನಗರ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗಂಡೇರ್ಬಲ್ ಜಿಲ್ಲೆನಲ್ಲಿ ರಾತ್ರಿಯಿಡೀ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ಸೇನೆ ಬುಧವಾರ ತಿಳಿಸಿದೆ.

ಅರ್ಹಾಮಾ ಪ್ರದೇಶದಲ್ಲಿ ಅನುಮಾನಾಸ್ಪದ ಚಲನವಲನಗಳ ಬಗ್ಗೆ ದೊರೆತ ಗುಪ್ತಚರ ಮಾಹಿತಿಯ ಮೇರೆಗೆ ಮಂಗಳವಾರ ರಾತ್ರಿ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿವೆ.

ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಂಯುಕ್ತವಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ, ಶೋಧದ ವೇಳೆ ಅನುಮಾನಾಸ್ಪದ ಚಲನವಲನಗಳು ಗಮನಕ್ಕೆ ಬಂದವು. ಪಡೆಗಳು ಪ್ರಶ್ನಿಸಿದಾಗ, ಅಡಗಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು.

ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ತಕ್ಷಣ ಪ್ರತಿದಾಳಿ ನಡೆಸಿ, ತಂತ್ರಾತ್ಮಕವಾಗಿ ಪ್ರದೇಶವನ್ನು ಮರುಸಂಘಟಿಸಿ ಸಮರ್ಪಕ ಕಾರ್ಯಾಚರಣೆ ನಡೆಸಿದ ಪರಿಣಾಮ ಒಬ್ಬ ಉಗ್ರನನ್ನು ಹೊಡೆದುರುಳಿಸಲಾಯಿತು ಎಂದು ಸೇನೆ ಮಾಹಿತಿ ನೀಡಿದೆ.

ಈ ನಡುವೆ, ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಹೆಚ್ಚಿನ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande