ನೇಪಾಳ ನೂತನ ಸರ್ಕಾರದೊಂದಿಗೆ ಸಹಕಾರಕ್ಕೆ ಭಾರತ ಬದ್ಧ: ನರೇಂದ್ರ ಮೋದಿ
ನವದೆಹಲಿ, 07 ಮಾರ್ಚ್ (ಹಿ.ಸ.): ಆ್ಯಂಕರ್: ನೆರೆಯ ರಾಷ್ಟ್ರ ನೇಪಾಳದ ಜನರು ಹಾಗೂ ಹೊಸ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನೇಪಾಳದಲ್ಲಿ ನಡೆದ ಸಂಸತ್ ಚುನಾವಣೆಯ ಯಶಸ್ವಿ ಹಾಗೂ ಶಾಂತಿಯುತ ಆಯೋಜನೆಗೆ ಅಭಿನಂದನೆ ಸಲ್ಲಿಸಿದ ಮೋದಿ,
Pm


ನವದೆಹಲಿ, 07 ಮಾರ್ಚ್ (ಹಿ.ಸ.):

ಆ್ಯಂಕರ್:

ನೆರೆಯ ರಾಷ್ಟ್ರ ನೇಪಾಳದ ಜನರು ಹಾಗೂ ಹೊಸ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೇಪಾಳದಲ್ಲಿ ನಡೆದ ಸಂಸತ್ ಚುನಾವಣೆಯ ಯಶಸ್ವಿ ಹಾಗೂ ಶಾಂತಿಯುತ ಆಯೋಜನೆಗೆ ಅಭಿನಂದನೆ ಸಲ್ಲಿಸಿದ ಮೋದಿ, ನೇಪಾಳದ ಜನರು ಉತ್ಸಾಹದಿಂದ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸಿರುವುದು ಸಂತಸದ ವಿಷಯ ಎಂದರು. ಇದು ನೇಪಾಳದ ಪ್ರಜಾಸತ್ತಾತ್ಮಕ ಪಯಣದಲ್ಲಿ ಹೆಮ್ಮೆಯ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ.

ನೆರೆಯ ಸ್ನೇಹಿ ರಾಷ್ಟ್ರವಾಗಿ ಭಾರತವು ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ನೇಪಾಳದ ಹೊಸ ಸರ್ಕಾರದೊಂದಿಗೆ ಇನ್ನಷ್ಟು ಸಹಕಾರವನ್ನು ಬಲಪಡಿಸಲಿದೆ ಎಂದು ಪ್ರಧಾನಿ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande